ಮೈಸೂರು.ಆಗಸ್ಟ್,21,2021(www.justkannada.in): ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ‘ಸಂಸತ್ ದರ್ಶನ’ ಕೃತಿಯು ಆ.27 ರಂದು ಬಿಡುಗಡೆಯಾಗಲಿದೆ.
ಇದಲ್ಲದೇ ಅವರ ‘ಕಾಡುಜೀವನ’, ‘ಸಮಾಜಮುಖಿ ಶ್ರೀಸಾಮಾನ್ಯರು’ ಕೃತಿಗಳ ಬಗ್ಗೆ ಮೈಸೂರು ವಿವಿ ಸಂಜೆ ಕಾಲೇಜಿನ ಸಹ ಪ್ರಾಧಾಪಕ ಡಾ.ಸಿ.ಡಿ. ಪರಶುರಾಮ ಬರೆದಿರುವ ‘ಕಾಡುಜನರ ಹಾಡುಪಾಡು’- ವಿಮರ್ಶಾ ಸಂಕಲನ ಕೂಡ ಅದೇ ದಿನ ಬಿಡುಗಡೆಯಾಗಲಿದೆ.
ಅಂದು ಬೆಳಗ್ಗೆ 10.30ಕ್ಕೆ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸಂವಹನ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ‘ಸಂಸತ್ ದರ್ಶನ’ ಕೃತಿಯನ್ನು ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್, ‘ಕಾಡುಜನರ ಹಾಡುಪಾಡು’ ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಂಸದ ಎಚ್. ವಿಶ್ವನಾಥ್ ಬಿಡುಗಡೆ ಮಾಡುವರು.
ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆ ವಹಿಸುವರು. ಕೃತಿ ಕುರಿತು ಸಾಹಿತಿ ಪ್ರೊ. ನೀಲಗಿರಿ ಎಂ. ತಳವಾರ್ ಮಾತನಾಡುವರು. ಎಂಡಿಎ, ಎಂಡಿಸಿಸಿ ಹಾಗೂ ಮೈಮುಲ್ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಮುಖ್ಯ ಅತಿಥಿಯಾಗಿರುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಸಂವಹನ ಪ್ರಕಾಶಕ ಡಿ.ಎನ್. ಲೋಕಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಆರಂಭದಲ್ಲಿ ಅಮ್ಮ ರಾಮಚಂದ್ರ ಮತ್ತು ತಂಡದಿಂದ ಗೀತಗಾಯನ ಇರುತ್ತದೆ. ಬಿಡುಗಡೆಯ ದಿನದಂದು ಎರಡು ಕೃತಿಗಳು ಸೇರಿ 100 ರೂ. ವಿಶೇಷ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುವುದು.
ENGLISH SUMMARY…..
Books authored by senior journalist Amshi Prasannakumar to be released on Aug. 27
Mysuru, August 21, 2021 (www.justkannada.in): A book titled ‘Samsath Darshana,’ authored by senior journalist Amshi Prasannakumar will be released on August 27.
Along with that book two other books titled, ‘Kaadujeevana,’ ‘Samajamukhi Sreesaamanyaru,’ and a critic ‘Kaadujanara Haadupaadu’ authored by University of Mysore Evening College Assistant Professor DR. C.D. Parashuram will also be released on the occasion.
The program will be held at 10.30 am, at the Rani Bahaddur Auditorium in Manasagangotri campus, under the auspices of the District Kannada Sahitya Parishat and Samvahana Prakashana. Chamarajanagara MP V. Srinivas Prasad will release the book ‘Samsath Bhavana.’ Former MP and MLC H. Vishwanath will release the book, ‘Kaadujanara Haadupaadu.’
Mysuru-Kodagu MP Pratap Simha will preside. Litterateur Prof. Neelagiri M. Talawar will share his views on the book. C. Basavegowda, former President, MDA, MDCC and Mymul will be the chief guest. District KSP President Dr. Y.D. Rajanna, Samvahana Prakashana publisher D.N. Lokappa will participate. These books will be sold at Rs.100 discounted rates at the venue.
Keywords: Senior journalist Amshi Prasannakumar/ book release/ August 27
Key words: senior journalist -Amshi Prasanna Kumar-books-release-aug 27th-mysore