ಮೈಸೂರು,ಮಾರ್ಚ್,14,2023(www.justkannada.in): ಹಿರಿಯ ಪತ್ರಕರ್ತ, ಲೇಖಕ ಅಂಶಿ ಪ್ರಸನ್ನಕುಮಾರ್ ಅವರ ಎರಡು ಕೃತಿಗಳು ಮಾರ್ಚ್ 19 ರಂದು ಲೋಕಾರ್ಪಣೆಯಾಗಲಿವೆ.
ವಿಸ್ಮಯ ಬುಕ್ಹೌಸ್ ಹಾಗೂ ಸಾಹಿತ್ಯ ಲೋಕ ಸಂಸ್ಥೆಯು ಅಂದು ಸಂಜೆ 4.30ಕ್ಕೆ ಹುಣಸೂರು ರಸ್ತೆಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ’ಸಾಹಿತ್ಯ ಸಂಪದ’ ಹಾಗೂ ‘ಸಾಹಿತ್ಯ ಸಂಗಮ’ ಕೃತಿಗಳನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಎಸ್. ನಾಗಾಭರಣ ಬಿಡುಗಡೆ ಮಾಡುವರು. ಪಂಪ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ.ಸಿ.ಪಿ. ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸುವರು. ಅಂಕಣಕಾರ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಎನ್ಎಸ್ಎಸ್ ರಾಜ್ಯ ಸಂಯೋಜನಾಧಿಕಾರಿ ಡಾ.ಗುಬ್ಬಿಗೂಡು ರಮೇಶ್ ಮುಖ್ಯ ಅತಿಥಿಯಾಗಿರುವರು.
ಸಂಜೆ 4ಕ್ಕೆ ಖ್ಯಾತ ಗಾಯಕ ಅಮ್ಮ ರಾಮಚಂದ್ರ ಮತ್ತು ತಂಡದಿಂದ ಗೀತಗಾಯನ ಕಾರ್ಯಕ್ರಮ ಇರುತ್ತದೆ. ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಆಗಮಿಸುವಂತೆ ಸಾಹಿತ್ಯ ಲೋಕ ಸಂಸ್ಥೆಯ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಹಾಗೂ ವಿಸ್ಮಯ ಬುಕ್ ಹೌಸ್ ನ ಪ್ರಕಾಶ್ ಚಿಕ್ಕಪಾಳ್ಯ ಕೋರಿದ್ದಾರೆ.
‘ಸಾಹಿತ್ಯ ಸಂಪದದಲ್ಲಿ ಸುಮಾರು 160 ಕೃತಿಗಳ ಪರಿಚಯ ಮತ್ತು ಒಳನೋಟ ಇದೆ. ಡಾ,ಸಿಪಿಕೆ ಮುನ್ನುಡಿ ಬರೆದಿದ್ದಾರೆ. ‘ಸಾಹಿತ್ಯ ಸಂಗಮ’ ಮೈಸೂರಿನ ಸಾಹಿತಿಗಳು, ಸಾಹಿತ್ಯ ಮತ್ತು ಕಲೆ ಕುರಿತ ಕೃತಿಯಾಗಿದ್ದು, ಪ್ರೊ.ಕಾಳೇಗೌಡ ನಾಗವಾರ ಮುನ್ನುಡಿ ಬರೆದಿದ್ದಾರೆ.
Key words: Senior journalist -Anshi’s -two works -e release- March 19.