ಹಿರಿಯ ವೃತ್ತಿಪರರಿಂದ ಭಾರತೀಯ ಆಡಳಿತ ಫೆಲೋಶಿಪ್‍ ಗೆ ಅರ್ಜಿ ಆಹ್ವಾನ

ಬೆಂಗಳೂರು,ಏಪ್ರಿಲ್,08,2021(www.justkannada.in) : ಕರ್ನಾಟಕ ಸರ್ಕಾರದೊಂದಿಗೆ ಕಾರ್ಯನಿರ್ವಹಿಸಲು ಉತ್ಸಾಹಭರಿತ ಹಿರಿಯ ವೃತ್ತಿಪರರಿಂದ ಭಾರತೀಯ ಆಡಳಿತ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ.Illegally,Sand,carrying,Truck,Seized,arrest,driver

ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯಲ್ಲಿ ಇಂಟರ್ನ್ ಆಗಿ ಸಂಶೋಧನೆ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಹೊಂದಿರುವ ಸ್ನಾತಕೋತ್ತರ ಅಭ್ಯರ್ಥಿಗಳು ಇಂಟರ್ನ್ ಆಗಿ ಸೇವೆ ಸಲ್ಲಿಸಲು www.sevasindhu.Karnataka.government.in  ಮೂಲಕ ಆನ್‍ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಇಂಟರ್ನ್‍ಶಿಪ್ ನಡೆಸುವವರಿಗೆ ಯಾವುದೇ ಆರ್ಥಿಕ ಸೌಲಭ್ಯಗಳಿರುವುದಿಲ್ಲ. ಅವರ ವರದಿ/ ಸಂಶೋಧನೆಗಳ ಉಪಯೋಗವನ್ನು ಕರ್ನಾಟಕ ಸರ್ಕಾರದ ನೀತಿ ನಿರೂಪಣೆ ಹಾಗೂ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು.

ಸರ್ಕಾರವು ದ/ನಡ್ಜ್ ಫೌಂಡೇಷನ್ ದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ 18 ತಿಂಗಳ ಅವಧಿಯ 12 ಭಾರತೀಯ ಆಡಳಿತ ಫೆಲೋಶಿಪ್‍ಗಾಗಿ ಸರ್ಕಾರದ 11 ಇಲಾಖೆಗಳಲ್ಲಿ ಕಾರ್ಯನಿರ್ವಹಿಸಲು ವೃತ್ತಿಪರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 18 ತಿಂಗಳ ಅವಧಿಗೆ 20 ಲಕ್ಷ ರೂ. ಫೆಲೋಶಿಪ್ ನೀಡಲಾಗುವುದು.

senior-professionals-Indian-Administration-fellowship-Apply-Invitation

ಆಸಕ್ತರು https://iaf.thenudge.org/ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 15 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ iaf@thenudge.org,  chayakd@gmail.com, aceokea@karnataka.gov.in ಅನ್ನು ಸಂಪರ್ಕಿಸಬಹುದಾಗಿದೆ.

ENGLISH SUMMARY..

Inviting applications for the Indian Administrative Fellowship from spirited senior professional to work with the Government of Karnataka

Through its Department of Planning, Programme & Statistics, the Government of Karnataka invites applications to conduct research initiatives. Interested Post Graduate candidates can submit their research internship applications through the ‘Sevasindhu’ website – www.sevasindhu.karnataka.gov.in. The interns will not be given any financial assistance but shall be receiving a certificate; the Government shall use the submitted report for policymaking and program planning.

The Government has also partnered with The/Nudge Foundation to invite the Indian Administrative Fellowship applications. The 12 Indian Administrative Fellows will be paid by The/Nudge Foundation to work with the Secretaries of 11 government departments for 18 months on an annual stipend of INR 20 lacs.

Interested candidates can submit their applications at https://iaf.thenudge.org/. The last date for applying is 15th April 2021.

For any queries and assistance, please contact at iaf@thenudge.org or chayakd@gmail.com or aceokea@karnataka.gov.in.

key words : senior-professionals-Indian-Administration-fellowship-Apply-Invitation