ಬೆಂಗಳೂರು,ಮೇ,13,2021(www.justkannada.in): ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ವಿಭಾಗದಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ವಿದ್ವಾಂಸರಾದ ಬಿ.ಎಸ್. ಸಣ್ಣಯ್ಯನವರು ವಯೋಸಹಜ ಖಾಯಿಲೆಗಳಿಂದ ದಿವಂಗತರಾಗಿದ್ದಾರೆ.
ಸುಮಾರು 95 ಅಮೂಲ್ಯವಾದ ಗ್ರಂಥಗಳನ್ನು ಸಂಪಾದನೆ ಮಾಡಿರುವ ಸಣ್ಣಯ್ಯ ಅವರು ದೇವಚಂದ್ರನ ರಾಜಾವಳಿ ಕಥಾಸಾರ, ನಾಗವರ್ಮನ ವರ್ಧಮಾನ ಪುರಾಣ ಮುಂತಾದ ಅಪರೂಪದ ಗ್ರಂಥಗಳನ್ನು ಮೊದಲಭಾರಿಗೆ ಸಂಪಾದಿಸಿ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ , ಚಾವುಂಡರಾಯ ಪ್ರಶಸ್ತಿ , ಗೊಮ್ಮಟೇಶ್ವರ ವಿದ್ಯಾಪೀಠ ಪುರಸ್ಕಾರ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಸಣ್ಣಯ್ಯನವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಹಾಗೂ ಸಣ್ಣಯ್ಯನವರ ಕುಟುಂಬದವರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ.ಎಂ.ಜಿ.ಮಂಜುನಾಥ ಅವರು ಶೋಕಾಚರಣೆಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Key words: Senior writer-BS Sannaiah-Pass Away