ಸೆ.20ರ ಕೆ-ಸೆಟ್ ಪರೀಕ್ಷೆಗೆ ಮೈಸೂರು ವಿವಿ ಸಜ್ಜು

ಮೈಸೂರು, ಆಗಸ್ಟ್, 26, 2020(www.justkannada.in) ; ಕೊರೊನಾದಿಂದಾಗಿ ಹಲವು ತಿಂಗಳುಗಳಿಂದ ಮುಂದೂಡಲಾಗಿದ್ದ ಕೆ-ಸೆಟ್ ಪರೀಕ್ಷೆಗೆ ಕಡೆಗೂ ದಿನಾಂಕ ನಿಗಧಿಯಾಗಿದ್ದು, ಸೆ.20ರಂದು ನಡೆಯುವ ಪರೀಕ್ಷೆಗೆ ಮೈಸೂರು ವಿವಿಯು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

jk-logo-justkannada-logo

ರಾಜ್ಯದಾದ್ಯಂತ ಮಾರ್ಚ್ ತಿಂಗಳಿನಲ್ಲಿಯೇ ಕೆ-ಸೆಟ್ ಪರೀಕ್ಷೆ ನಡೆಯಬೇಕಿತ್ತು. ಆದರೆ, ಕೊರೊನಾದಿಂದಾಗಿ ಪರೀಕ್ಷೆಯನ್ನು ಇಲ್ಲಿಯವರೆಗೆ ಮುಂದೂಡುವ ಪರಿಸ್ಥಿತಿ ಎದುರಾಯಿತು.

sep,20-cassette-exam-mysor vv-outfit

1 ಲಕ್ಷದ 4ಸಾವಿರದ 250 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

ಸೆ.20ರಂದು ಭಾನುವಾರ ಕೆ-ಸೆಟ್ ಪರೀಕ್ಷೆ ನಡೆಯಲಿದ್ದು, ರಾಜ್ಯದಾದ್ಯಂತ ಕೆ ಸೆಟ್ ಪರೀಕ್ಷೆಯನ್ನು 1 ಲಕ್ಷದ 4ಸಾವಿರದ 250 ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಮೈಸೂರು ವಿವಿ ವ್ಯಾಪ್ತಿಯಲ್ಲಿ 11 ನೋಡೆಲ್ ಸೆಂಟರ್ ನಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಯುಜಿಸಿ ಅನುಮತಿಯಂತೆ ಈ ಬಾರಿ 49 ವಿಷಯಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಪರೀಕ್ಷಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ

ಪರೀಕ್ಷೆ ಬರೆಯಲು ಆಗಮಿಸುವ ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ನೋಡೆಲ್ ಸೆಂಟರ್ ಗಳಲ್ಲಿ ಸ್ಯಾನಿಟೈಸರ್,  ಮಾಸ್ಕ್ ಬಳಕೆ ಹೀಗೆ ಅಗತ್ಯ ಕ್ರಮಗಳ ಬಗ್ಗೆ ಗಮನಹರಿಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಆನ್ ಲೈನ್ ಮೀಟಿಂಗ್ ಮೂಲಕ ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.

key words ; sep,20-cassette-exam-mysor vv-outfit