ಬೆಂಗಳೂರು, 17 ನವೆಂಬರ್ 2020: ನಟ ದುನಿಯಾ ವಿಜಯ್ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಝೀ ಕನ್ನಡದ ಪಾರು ಧಾರವಾಹಿಯ ನಟಿ ಮೋಕ್ಷಿತಾ ಪೈ ಆಯ್ಕೆಯಾಗಿದ್ದಾರೆ.
ಸಲಗ ಸಿನಿಮಾ ನಿರ್ದೇಶಿಸಿರುವ ವಿಜಿ ಶೀಘ್ರದಲ್ಲೇ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದಾಗಿ ಘೋಷಿಸಿ ಚಿತ್ರಕ್ಕೆ ರಾಜ್ ಕುಟುಂಬದ ಲಕ್ಕಿ ಗೋಪಾಲ್ ನಾಯಕ ಎಂದು ಘೋಷಿಸಿದ್ದರು. ಇದೀಗ ನಾಯಕ ನಟಿಯ ಆಯ್ಕೆಯೂ ಫೈನಲ್ ಆಗಿದೆ.
ವಿಜಯ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಬಹುತೇಕರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದೆ.
ಪಾರು ಧಾರಾವಾಹಿ ಮೂಲಕ ನಾಡಿನ ಹೆಂಗೆಳೆಯರ ಗಮನ ಸೆಳೆದಿರುವ ಮೋಕ್ಷಿತಾ ಪೈ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ವಾಸುಕಿ ವೈಭವ್ ಮತ್ತು ಚರಣ್ ರಾಜ್ ಸಂಗೀತ, ಬಾಲು ಶಿವಮೊಗ್ಗ ಛಾಯಾಗ್ರಹಣ, ಮಾಸ್ತಿ ಮಂಜು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ.