ಬೆಂಗಳೂರು,ಆಗಸ್ಟ್,24,2022(www.justkannada.in): ರಾಜ್ಯ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪ ಮತ್ತೆ ಮುಂಚೂಣಿಗೆ ಬಂದಿದ್ದು, ಕೋಲಾರ ಉಸ್ತುವಾರಿ ಸಚಿವ ಮುನಿರತ್ನ ಅವರೇ ಹಣ ಕೇಳುತ್ತಾರೆ. ಹಣ ಕಲೆಕ್ಟ್ ಮಾಡಿಕೊಂಡು ಬನ್ನಿ ಎಂದು ಹೇಳುತ್ತಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಂಭೀರ ಆರೋಪ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದಗುತ್ತಿಗೆದಾರರ ಸಂಘದ ನಿಯೋಗ ಭೇಟಿ ಮಾಡಿ ಚರ್ಚೆ ನಡೆಸಿದೆ. ಸಿದ್ದರಾಮಯ್ಯ ಮನೆಗೆ ಗುತ್ತಿಗೆದಾರರ ಸಂಘದ 30ಕ್ಕೂ ಹೆಚ್ಚು ಸದಸ್ಯರು ಭೇಟಿ ನೀಡಿ ಚರ್ಚಿಸಿದರು.
ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್, ಸಚಿವ ಮುನಿರತ್ನ ಗುತ್ತಿಗೆದಾರರಿಂದ ಹಣ ಕಲೆಕ್ಷನ್ ಮಾಡಿಕೊಡಲು ಎಇಗೆ ಹೇಳುತ್ತಾರೆ. ಪರ್ಸೆಂಟೇಜ್ ಕಲೆಕ್ಷನ್ ಮಾಡದಿದ್ದರೇ ಸಸ್ಪಂಡ್ ಮಾಡುವುದಾಗಿ ಹೆದರಿಸುತ್ತಾರೆ. ಜಿಲ್ಲಾ ಉಸ್ತುವಾರಿಸಚಿವರೇ ಹಣ ಕಲೆಕ್ಟ್ ಮಾಡಿ ಅಂತಾರೆ ಇದು ಅತ್ಯಂತ ಭ್ರಷ್ಟ ಸರ್ಕಾರ ಎಂದು ಆರೋಪಿಸಿದರು.
ಮಾನ ಮರ್ಯಾದೆ ಇಲ್ಲದೇ ಕಮಿಷನ್ ಕೇಳ್ತಾರೆ. ಕೆಲವು ಕಡೆ ಶೇ.100 ರಷ್ಟ ಕಮಿಷನ್ ಇದೆ. ಎಲ್ಲಾ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಹೀಗಾಗಿ 40 ಪರ್ಸೆಂಟ್ ಕಮಿಷನ್ ಕೇಸ್ ನ್ಯಾಯಾಂಗ ತನಿಖೆಯಾಗಬೇಕು. 15 ದಿನಗಳಲ್ಲಿ ಮತ್ತೆ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇವೆ ಎಂದು ಕೆಂಪಣ್ಣ ಹೇಳಿದ್ದಾರೆ.
ಸಿದ್ಧರಾಮಯ್ಯ ಭೇಟಿ ವೇಳೆ ಯಾವುದೇ ದಾಖಲೆ ನೀಡಿಲ್ಲ. ಅವರು ಈ ವಿಚಾರವನ್ನ ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಈಹಿಂದೆ ಕೆಲವು ದಾಖಲೆ ನೀಡಿದ್ದರಿಂದ ಕೆಲವು ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದೇ ಸಮಸ್ಯೆಯಾಗಿದೆ ಎಂದರು.
Key words: serious -allegation -against -Minister –Muniratha-Kempanna