ಬೆಂಗಳೂರು,ಜುಲೈ,15,2024 (www.justkannada.in): ರಾಜ್ಯ ವಿಧಾನ ಮಂಡಲ ಮುಂಗಾರು ಅಧಿವೇಶನ ಇಂದಿನಿಂದ ಶುರುವಾಗಿದ್ದು ಈ ಮಧ್ಯೆ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿನ ಅಕ್ರಮ ಕುರಿತು ಸದನದಲ್ಲಿ ಪ್ರಸ್ತಾಪವಾಗಿದೆ.
ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣ ಕುರಿತು ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ , ಅಕ್ರಮದ ಬಗ್ಗೆ ನಾಗೇಂದ್ರ ಒಪ್ಪಿಕೊಂಡಿದ್ದಾರೆ. ದಲಿತರ ಹಣವನ್ನ ಲೂಟಿ ಹೊಡೆದಿದ್ದಾರೆ. ಕರ್ನಾಟಕ ಇತಿಹಾಸದಲ್ಲೇ ಇದು ದೊಡ್ಡ ಕಪ್ಪು ಚುಕ್ಕೆ ಎಂದು ಗುಡುಗಿದರು.
ಕಟಾಕಟ್ ಅಂತೇಳಿ ನೂರಕ್ಕೆ ನೂರರಷ್ಟು ಲೂಟಿ ಮಾಡಿ್ದ್ದಾರೆ. ನಿಗಮದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂಗೆ ಆಗಿದೆ. ದಲಿತರ ಹಣ ಲೂಟಿ ಹೊಡೆದಿದ್ದಾರೆ. ಇತಿಹಾಸದಲ್ಲೇ ಯಾರೂ ದಲಿತರ ಹಣ ನುಂಗಿರಲಿಲ್ಲ . ವಾಲ್ಮೀಕಿ ನಿಗಮದ ಹಣ ಬೇರೆ ರಾಜ್ಯಕ್ಕೆ ಹೋಗಿದೆ ಎಂದು ಆರ್.ಅಶೋಕ್ ಹರಿಹಾಯ್ದರು.
ಆರ್ ಅಶೋಕ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ, ಅಕ್ರಮದ ಬಗ್ಗೆ ನಾಗೇಂದ್ರ ಒಪ್ಪಿಕೊಂಡಿಲ್ಲ. ಹಣ ಲೂಟಿ ಹೊಡೆದಿದ್ದಾರೆ ಅನ್ನೋದು ಸರಿಯಲ್ಲ ಎಂದು ಕಿಡಿಕಾರಿದರು.
Key words: session, R. Ashok, Valmiki Corporation, Scam