ಬೆಂಗಳೂರು,ಜು,18,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಪ್ರಸ್ತಾವ ಮಂಡಿಸಿ ಭಾಷಣ ಮಾಡಿದರು. ಈ ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪವೆತ್ತಿದರು.
ವಿಶ್ವಾಸಮತ ಪ್ರಸ್ತಾಪ ಮೇಲೆ ಭಾಷಣ ಮಾಡಿದ ಸಿದ್ದರಾಮಯ್ಯ ಸಿಎಂ ಹೆಚ್.ಡಿ ಕುಮಾರಸ್ವಾಮಿ 10ನೇ ಷೆಡ್ಯೂಲ್ ಬಗ್ಗೆ ಪ್ರಸ್ತಾಪಿಸಿದರು. 1967 ರಲ್ಲಿ ಗಯಾಲಾಲ್ ಒಂದೇ ದಿನದಲ್ಲಿ ಮೂರು ಪಕ್ಷಗಳಿಗೆ ಪಕ್ಷಾಂತರ ಮಾಡುತ್ತಾರೆ. ಇದನ್ನ ತಪ್ಪಿಸಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತಂದರು. ಪಕ್ಷಂತರ ನಿಷೇಧ ಕಾಯ್ದೆ ಮಾಡಿದ ಕೀರ್ತಿ ರಾಜೀವ್ ಗಾಂಧಿ ಅವರಿಗೆ ಸಲ್ಲಬೇಕು. ಪಕ್ಷಾಂತರ ಪಿಡುಗನ್ನ ಕೊನೆಗಾಣಿಸಬೇಕು. ಮಧು ದಂಡವತೆ ದೇಶಕಂಡ ಅಪರೂಪದ ರಾಜಕಾರಣಿ ಅವರು ಸ್ವಚ್ಛ ರಾಜಕಾರಣ ಬಗ್ಗೆ ಕನಸು ಕಂಡಿದ್ದರು. ಅವರು ಕಂಡಕನಸು ಸಂವಿಧಾನದ 10ನೇ ಅನುಸೂಚಿಯಾಗಿದೆ ಎಂದರು.
ಪಕ್ಷಾಂತರ ಪ್ರಜಾಪ್ರಭುತ್ವದ ಬುಡವನ್ನ ಅಲುಗಾಡುತ್ತೆ. ಹೀಗಾಗಿ ಈ ಬಗ್ಗೆ ಚರ್ಚೆ ಪ್ರಾರಂಭಿಸುತ್ತಾರೆ. ಪ್ರಜಾಪ್ರಭುತ್ವ ಶುದ್ಧೀಕರಣವಾಗಬೇಕಾದರರೇ ಪಕ್ಷಾಂತರಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಚರ್ಚೆ ಆಗುತ್ತಿದೆ. ಹೀಗಾಗಿ ಸಂವಿಧಾನ ಕುರಿತು ಸ್ಪಷ್ಟನೆ ಕೇಳಲು ಕ್ರಿಯಾಲೋಪವೆತ್ತಿದೆ. ಪಕ್ಷಾಂತರ ಪಿಡುಗು ಕೊನೆಗಾಣಿಸಬೇಕು. ಪ್ರಜಾಪ್ರಭುತ್ವ ಶುದ್ಧಿಕರಣ ಆಗಬೇಕು ಎಂದರು.
ಇದು ರಾಜಕಾರಣ ಶುಧ್ದೀಕರಣ ಯುಗವಾಗಿದೆ. ರಾಜಕಾರಣ ಶುದ್ಧವಾಗಬೇಕಿದೆ. ಪಕ್ಷ ನಿರ್ಣಯದ ವಿರುದ್ದ ನಡೆದುಕೊಂಡರೇ ಅನರ್ಹನಾಗುತ್ತಾರೆ. ನಾನು ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ನಮ್ಮ ಸದಸ್ಯರಿಗೆ ವಿಪ್ ಕೊಡುವ ಅಧಿಕಾರವಿದೆ. ವಿಪ್ ಗೆ ಚ್ಯುತಿಯಾಗುವ ರೀತಿ ಸುಪ್ರೀಂ ಆದೇಶವಿದೆ. ಈವರೆಗೆ ಪಕ್ಷಾಂತರ ನಿಷೇಧ ಕಾಯ್ದೆಯೇ ತಿದ್ದುಪಡಿಯಾಗಿಲ್ಲ ಎಂದು ಸಿದ್ದರಾಮಯ್ಯ ವಿಧಾನಸಭೆಯಲ್ಲಿ ತಿಳಿಸಿದರು.
Key words: session-Siddaramaiah-congress- legislative party- assenbly