ಬೆಂಗಳೂರು,ಸೆಪ್ಟಂಬರ್,24,2020(www.justkannada.in): ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನಕ್ಕೆ ರಾಜ್ಯ ವಿಧಾನಸಭೆ ಕಲಾಪದಲ್ಲಿ ಕಾನೂನು ಸಚಿವ ಮಾಧುಸ್ವಾಮಿ, ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.
ವಿಧಾನಸಭೆ ಕಲಾಪ ಪ್ರಾರಂಭ ಪ್ರಾರಂಭವಾಗುತ್ತಿದ್ದಂತೆ ಕಲಾಪದಲ್ಲಿ ಸುರೇಶ್ ಅಂಗಡಿ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಈ ವೇಳೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ನಿನ್ನೆ ಸದನ ಮುಗಿಸಿ ಮನೆಗೆ ಹೋಗಿ ಕುಳಿತೆ. ಟಿವಿ ಸ್ವಿಚ್ ಆನ್ ಮಾಡ್ತಿದ್ದಂತೆ ಅವರ ನಿಧನದ ಸುದ್ದಿ ಬಂತು. ಅದನ್ನ ನೋಡಿಯೇ ನಾನು ಶಾಕ್ ಆದೆ. ಎ ಸಿಂಟಮಿಕ್ ಇತ್ತು ಅಂತ ಆಸ್ಪತ್ರೆಗೆ ದಾಖಲಾಗಿದ್ದರು. ಎ ದರ್ಜೆಯ ಆಸ್ಪತ್ರೆಯಲ್ಲೇ ಈ ಸೋಂಕನ್ನ ಎದುರಿಸಲಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿ ಕುಟುಂಬದಿಂದ ಬಂದವರು ಅವರು ವಾಸವದತ್ತ ಸಿಮೆಂಟ್ ಕಾರ್ಖಾನೆ ಕಟ್ಟಿ ಬೆಳೆಸಿದವರು. ದೆಹಲಿಯಲ್ಲಿ ಕುಳಿತು ರಾಜ್ಯದ ಕೆಲಸ ಮಾಡಿಸಿಕೊಡ್ತಿದ್ರು. ದೆಹಲಿ ನಮಗೆ ಒಂದು ಕೊಂಡಿಯಂತಿದ್ದರು. ರೈಲ್ವೆ ಕ್ರಾಸಿಂಗ್ ಮೇಲ್ಸೇತುವೆ ಮಾಡಿಕೊಟ್ಟಿದ್ದರು. ತುಮಕೂರು,ಶಿವಮೊಗ್ಗ ಮಾರ್ಗದಲ್ಲಿ ಕೊಟ್ಟಿದ್ದರು ಅವರ ನಿಧನ ತುಂಬಲಾರದ ನಷ್ಟ ಎಂದು ಮಾಧುಸ್ವಾಮಿ ಸಂತಾಪ ಸೂಚಿಸಿದರು.
ಬಾದಾಮಿಯಲ್ಲಿ ಓವರ್ ಬ್ರಿಡ್ಜ್ ಗೆ ರಿಕ್ವೆಸ್ಟ್ ಮಾಡಿದ್ದೆ: ಇದಕ್ಕೂ ಮುನ್ನವೇ ನಿಧನರಾಗಿದ್ದಾರೆ- ಸಿದ್ಧರಾಮಯ್ಯ..
ಇದೇ ವೇಳೆ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ವಿಪಕ್ಷ ನಾಯಕ ಸಿದ್ಧರಾಮಯ್ಯ, ಸುರೇಶ್ ಅಂಗಡಿ ಸಜ್ಜನ,ಸ್ನೇಹಜೀವಿ. ಅಶೋಕ್ ಗಸ್ತಿ ಅವರು ಕೊರೋನಾಗೆ ಸಾವನ್ನಪ್ಪಿದರು. ಇವರು ಸಹ ಕೊರೋನಾಗೆ ಬಲಿಯಾಗಿದ್ದು ದುರ್ದೈವ. ಪ್ರಖ್ಯಾತ ಆಸ್ಪತ್ರೆಯಲ್ಲೇ ನಿಧನರಾಗಿದ್ದು ಆಶ್ಚರ್ಯ ಎಂದು ಹೇಳಿದರು.
ಸುರೇಶ್ ಅಂಗಡಿ ನಾಲ್ಕು ಬಾರಿ ಎಂಪಿಯಾಗಿದ್ದರು. ಪಾಪಾ ನಾರಾಯಣರಾವ್ ಕೂಡ ಗಂಭೀರವಾಗಿದ್ದಾರೆ. ಕೊರೋನಾದಿಂದ ಗುಣಮುಖರಾದವರಿಗೆ ಮತ್ತೆ ಬರಬಹುದು. ಇಮ್ಯುನಿಟಿ ಡೆವಲಪ್ ಮಾಡಿಕೊಳ್ಳಬೇಕು. ಬಂದವರು,ಬರದಿದ್ದವರು ಬಹಳ ಎಚ್ಚರಿಕೆ ವಹಿಸಬೇಕು. ಅಂಗಡಿ ನಿಧನದ ನಂತರ ಮತ್ತಷ್ಟು ಆತಂಕವಾಗಿದೆ. ಭಯ ಪಡೋದು ಬೇಡ,ಮುನ್ನೆಚ್ಚರಿಕೆ ತೆಗೆದುಕೊಳ್ಬೇಕು ಎಂದರು.
ಬಾದಾಮಿಯಲ್ಲಿ ಓವರ್ ಬ್ರಿಡ್ಜ್ ಗೆ ರಿಕ್ವೆಸ್ಟ್ ಮಾಡಿದ್ದೆ ಮಾಡಿಕೊಡುವ ಮುನ್ನವೇ ನಿಧನರಾಗಿದ್ದಾರೆ ಅವರ ಕುಟುಂಬಕ್ಕೆ ದುಃಖ ತಡೆಯುವ ಶಕ್ತಿ ನೀಡಲಿ ಎಂದು ತಿಳಿಸಿದರು.
ಇದೇ ವೇಳೆ ಡೆಪ್ಯೂಟಿ ಸ್ಪೀಕರ್ ಆನಂದ್ ಮಾಮನಿ ಮಾತನಾಡಿ, ಸುರೇಶ್ ಅಂಗಡಿ ನಿಧನ ಅತೀವ ದುಃಖ ತಂದಿದೆ. ಬೆಳಗಾವಿಯಿಂದ ನಾಲ್ಕು ಬಾರಿ ಸಂಸದರಾಗಿದ್ದರು. ಒಂದು ವರ್ಷದಿಂದ ಕೇಂದ್ರ ರೇಲ್ವೆ ರಾಜ್ಯ ಖಾತೆ ನಿಭಾಯಿಸುತ್ತಿದ್ರು. ಅನೇಕ ರೇಲ್ವೆ ಯೋಜನೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಲಸದ ಮೂಲಕ ತಮ್ಮ ಛಾಪು ಮೂಡಿಸಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ತಿಳಿಸಿದರು.
ಸುರೇಶ್ ಅಂಗಡಿಯವರ ನಿಧನ ಸುದ್ದಿ ಕೇಳಿ ಶಾಕ್ ಆಯ್ತು- ಡಿ.ಕೆ ಶಿವಕುಮಾರ್
ಹಾಗೆಯೇ ಡಿ.ಕೆ ಶಿವಕುಮಾರ್ ಮಾತನಾಡಿ, ನಿನ್ನೆ ನಾವು ನಮ್ಮ ಶಾಸಕರಿಗೆ ಊಟದ ವ್ಯವಸ್ಥೆ ಮಾಡಿದ್ದೆ. ಈ ವೇಳೆ ಸುರೇಶ್ ಅಂಗಡಿಯವರ ನಿಧನ ಸುದ್ದಿ ಕೇಳಿ ಶಾಕ್ ಆಯ್ತು. ನಮ್ಮ ಶಾಸಕರು ಊಟ ಮಾಡೋದನ್ನೇ ನಿಲ್ಲಿಸಿಬಿಟ್ರು. ಅಂತಹ ಅಜಾತ ಶತ್ರು ಸುರೇಶ್ ಅಂಗಡಿಯವರು ಎಂದು ಹೊಗಳಿದರು.
ನಮ್ಮ ಮನಸ್ಸು,ಜೀವ ಎರಡೂ ಚಂಚಲ. ಯಾವಾಗ ಏನಾಗುತ್ತೆ ಗೊತ್ತಾಗಲ್ಲ. ಅದೇ ರೀತಿ ಸುರೇಶ್ ಅಂಗಡಿಯವರದ್ದೂ ಆಗಿದೆ. ಅವರನ್ನ ನಾನು ಭೇಟಿ ಮಾಡಿ ಮಾತನಾಡಿದ್ದೆ. ಹೀಗಿಲ್ಲ ಅನ್ನೋದು ಕೇಳಿದ್ರೆ ನೋವಾಗುತ್ತೆ. ಕೊರೋನಾ ಬಗ್ಗೆ ನಾನು ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ನಮ್ಮ ಸಿಎಲ್ಪಿ ನಾಯಕರು ಪದೇ ಪದೇ ಎಚ್ಚರಿಸೋರು. ನನಗೂ ಕೊರೋನಾ ಬಂದಾಗ ಉಸಿರಾಟವೇ ಕಷ್ಟವಾಗಿತ್ತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ನಾನು ಸುರೇಶ್ ಅಂಗಡಿ ಅವರ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಆಗ ಎಲ್ಲೂ ಸಭ್ಯತೆಯನ್ನ ನಾವು ಮೀರಲಿಲ್ಲ. ಎದುರು ಸ್ಪರ್ಧಿಗಳಾಗಿದ್ದರೂ ಎಲ್ಲೆ ಮೀರಿ ಮಾತನಾಡಲಿಲ್ಲ. ಸುರೇಶಣ್ಣನನ್ನ ಕಳೆದುಕೊಂಡು ನನಗೆ ನೋವಾಗಿದೆ ಎಂದು ಮಾತನಾಡುತ್ತಲೇ ಭಾವುಕರಾದರು.
Key words: session-Siddaramaiah-DK Kesivakumar – condole -death – Union Minister -Suresh angadi