ನಾಳೆಯಿಂದ ವಿಧಾನಮಂಡಲ ಅಧಿವೇಶನ: ವಿಧಾನಸೌಧದ ಸುತ್ತ ಮುತ್ತ ನಿಷೇಧಾಜ್ಞೆ ಜಾರಿ…

ಬೆಂಗಳೂರು,ಜನವರಿ,27,2021(www.justkannada.in):  ನಾಳೆಯಿಂದ ನಾಳೆಯಿಂದ ರಾಜ್ಯ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ವಿಧಾನಸೌಧದ  ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. jk

ರಾಜ್ಯ ವಿಧಾನಮಂಡಲ ಅಧಿವೇಶನ ನಾಳೆಯಿಂದ ಆರಂಭಗೊಂಡು, ಫೆಬ್ರವರಿ 5ರವರೆಗೆ ನಡೆಯಲಿದ್ದು, ಫೆಬ್ರವರಿ 5ರವರೆಗೂ ವಿಧಾನಸೌಧಧ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ನಾಳೆಯಿಂದ ಆರಂಭಗೊಳ್ಳಲಿರುವ ವಿಧಾನಮಂಡಲದ ಅಧಿವೇಶನದ ಮೊದಲ ದಿನ, ಜಂಟಿ ಸದನಗಳನ್ನು ಉದ್ದೇಶಿಸಿ, ರಾಜ್ಯಪಾಲ ವಜುಭಾಯಿ ವಾಲಾ ಮಾತನಾಡಲಿದ್ದಾರೆ. ಕೋವಿಡ್ ನಿರ್ವಹಣೆಯ ಜೊತೆಗೆ, ರಾಜ್ಯ ಸರ್ಕಾರದ ಅಭಿವೃದ್ಧಿಯ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ. session – tomorrow-144 section- enforcement -vidhanasoudha

ಹಾಗೆಯೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಕೊರೋನಾ ಟೆಸ್ಟ್ ಕಡ್ಡಾಯವಲ್ಲ. ಆದರೇ ಕೊರೋನಾ ಟೆಸ್ಟ್ ಗೆ ವ್ಯವಸ್ಥೆ ಇರುತ್ತದೆ. ಬೇಕಾದವರು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಬಹುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ENGLISH SUMMARY…

Assembly session from tomorrow: Prohibitory orders around Vidhana Soudha
Bengaluru, Jan. 27, 2021 (www.justkannada.in): Prohibitory orders have been implemented in the surroundings of Vidhana Soudha as the Assembly session will begin from tomorrow.
Hon’ble Governor Vajubhai Vala will address the joint houses on the first day of the session. He will speak about the management of the COVID-19 pandemic, along with development issues of the State Government.
Corona test is not mandatory to attend the session anyway arrangements are made available for the test, for those who intend to go through, according to speaker Vishweshwar Hegde Kageri.
Keywords: Assembly session from tomorrow/ prohibitory orders/ Governor

Key words:  session – tomorrow-144 section- enforcement -vidhanasoudha