ಬೆಂಗಳೂರು,ಫೆಬ್ರವರಿ,19,2021(www.justkannada.in): ಪ್ರತಿಷ್ಠಿತ ಕ್ಲಬ್ ಉಪಾಧ್ಯಕ್ಷರೊಬ್ಬರು ಮಹಿಳಾ ಪ್ರಾಂಶುಪಾಲರೊಬ್ಬರಿಗೆ ಲೈಂಗಿಕ ಕಿರುಕುಳ ನೀಡುರುವ ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಬಸನವನಗುಡಿಯ ಯುನಿಯನ್ ಕ್ಲಬ್ ಉಪಾಧ್ಯಕ್ಷ ಮೋಹನ್ ರಾವ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಮಹಿಳಾ ಪ್ರಾಂಶುಪಾಲರೊಬ್ಬರು ಫೆಬ್ರವರಿ 6 ರಂದು ಯುನಿಯನ್ ಕ್ಲಬ್ ಗೆ ಹೋಗಿದ್ದ ವೇಳೆ ಮೋಹನ್ ರಾವ್ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮಹಿಳೆ ಕ್ಲಬ್ ಗೆ ಹೋಗಿದ್ದಾಗ ಶೌಚಾಲಯಕ್ಕೆಂದು ತೆರಳುತ್ತಿದ್ದ ವೇಳೆ ಅವರನ್ನು ತಡೆದಿದ್ದ ಮೋಹನ್ ರಾವ್, ಅಸಭ್ಯವಾಗಿ ವರ್ತಿಸಿದ್ದು, ಈ ಹಿನ್ನೆಲೆಯಲ್ಲಿ ಮಹಿಳಾ ಪ್ರಾಂಶುಪಾಲರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೋಹನ್ ರಾವ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
Key words: Sexual harassment – club -vice president – principal.