ಮೆಲ್ಬೋರ್ನ್, ಮಾರ್ಚ್ 09, 2020 (www.justkannada.in): ಎರಡೂ ಮಾದರಿಯ ಕ್ರಿಕೆಟ್ನ(20 ಹಾಗೂ 50 ಓವರ್)ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಆಡಿದ ಅತ್ಯಂತ ಕಿರಿಯ ವಯಸ್ಸಿನ(16 ವರ್ಷ)ಆಟಗಾರ್ತಿ ಎನಿಸಿಕೊಂಡಿರುವ ಶೆಫಾಲಿ ವರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಶೆಫಾಲಿಗೆ ಈಗ 16 ವರ್ಷ, 40 ದಿನಗಳು. ಹೀಗಾಗಿ ಅವರು ಇತಿಹಾಸದ ಪುಸ್ತಕಕ್ಕೆ ಸೇರ್ಪಡೆಯಾದರು. ಈ ದಾಖಲೆಯು ವೆಸ್ಟ್ಇಂಡೀಸ್ ಮಹಿಳಾ ಕ್ರಿಕೆಟರ್ ಶಖ್ವಾನ ಕ್ವಿಂಟೈನ್ ಹೆಸರಲ್ಲಿತ್ತು. ಕ್ವಿಂಟೈನ್ 2013ರಲ್ಲಿ ತನ್ನ 17ನೇ ವಯಸ್ಸಿನಲ್ಲಿ ವಿಶ್ವಕಪ್ ಫೈನಲ್ನಲ್ಲಿ ಆಡಿದ್ದರು.
ಭಾರತ ಹಾಗೂ ಆಸ್ಟ್ರೇಲಿಯ ತಂಡಗಳು ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಶೆಫಾಲಿ ಟೂರ್ನಮೆಂಟ್ನಲ್ಲಿ ಒಟ್ಟು 161 ರನ್ ಗಳಿಸಿದ್ದು, ಶ್ರೀಲಂಕಾ ವಿರುದ್ಧ ಗರಿಷ್ಠ 47 ರನ್ ಗಳಿಸಿದ್ದರು.