ಬೆಂಗಳೂರು, ಸೆಪ್ಟೆಂಬರ್ 07, 2019 (www.justkannada.in): ಶಾರುಖ್ ಪುತ್ರಿ ಸುಹಾನಾ ಸದ್ಯ ಪದವಿ ಮುಗಿಸಿ, ಈಗ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ.
ನ್ಯೂಯಾರ್ಕ್ನ ವಿಶ್ವವಿದ್ಯಾಲಯಕ್ಕೆ ಈಗಷ್ಟೆ ಎಂಟ್ರಿ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ತಮ್ಮ ಫೋಟೋಗಳಿಂದಲೇ ಸದ್ದು ಮಾಡುವ ಸುಹಾನಾ, ಈಗ ಮತ್ತೆ ಇದೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಸುಹಾನಾ ಖಾನ್, ಹಿಂದೆಯೂ ಸಾಕಷ್ಟು ಸಲ ಸುಹಾನಾ ಕೇವಲ ತಮ್ಮ ಫೋಟೋಗಳಿಂದಲೇ ಸದ್ದು ಮಾಡಿದ್ದರು.
ಈಗಲೂ ಸಹ ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಸೇರಿದ್ದು, ಅಲ್ಲಿನ ಕ್ಯಾಂಪಸ್ನಲ್ಲಿ ಸುಹಾನಾ ಇರುವ ಒಂದು ಚಿತ್ರ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದ್ದು, ಅದು ಈಗ ವೈರಲ್ ಆಗುತ್ತಿದೆ.