ಮೈಸೂರು,ಅಕ್ಟೋಬರ್,15,2020(www.justkannada.in) : ಷಂಡಾ, ಕೈಲಾಗದವರು, ನಾಮರ್ದರಿಗೆ ರಕ್ಷಣೆ ಕೊಡಿ. ನಿಮ್ಮನ್ನ ಷಂಡರು,ಕೈಲಾಗದವರು,ಗಂಡಸರಲ್ಲ ಎಂದು ಕರೆದವರನ್ನ ಬಿಟ್ಟು ಬಿಡುತ್ತಿರಿ. ನಮ್ಮನ್ನ ತಡೆಯೋಕೆ ಬರ್ತಿರಿ ಎಂದು ಪೊಲೀಸರ ವಿರುದ್ಧ ಮಾಜಿ ಮೇಯರ್ ಪುರುಷೋತ್ತಮ್ ವಾಗ್ದಾಳಿ ನಡೆಸಿದ್ದಾರೆ.
]ಗುರುವಾರ ಅಶೋಕಪುರಂನಲ್ಲಿ ನಡೆದ ಮಹಿಷಾ ದಸರಾ ಆಚರಣೆ ವೇಳೆ ಚಾಮುಂಡಿಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ಮಾಡಿಕೊಡದಿರುವುದಕ್ಕೆ ಪುರುಷೋತ್ತಮ್ ಆಕ್ರೋಶವ್ಯಕ್ತಪಡಿಸಿದರು.
ನಮ್ಮ ಕಾರ್ಯಕ್ರಮಕ್ಕೆ ರಕ್ಷಣೆ ಕೊಡಿ ಅಂತಾ ನಾವು ಕರೆದಿರಲಿಲ್ಲ. ನಮ್ಮ ಮನೆ ಬಾಗಿಲಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಪೊಲೀಸರ ವಿರುದ್ದ ಹರಿಹಾಯ್ದಿದ್ದಾರೆ. ಕಳೆದ ವರ್ಷದ ಮಹಿಷಾ ದಸರಾ ಆಚರಣೆ ವೇಳೆ ನಡೆದ ಗಲಾಟೆಯನ್ನ ಪ್ರಸ್ತಾಪಿಸಿದ ಪುರುಷೋತ್ತಮ್ ಸಂಸದ ಪ್ರತಾಪ್ ಸಿಂಹ ಕುರಿತು ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳ ವಿರುದ್ದ ಅಟ್ರಾಸಿಟಿ ಕೇಸ್ ಎಚ್ಚರಿಕೆ
ಉರಿಲಿಂಗಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮಿಜಿ ಮಾತನಾಡಿ, ಚಾಮುಂಡಿ ಬೆಟ್ಟದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಲಾಗುತ್ತಿದೆ. ನಮ್ಮನ್ನ ಏಕೆ ಬೆಟ್ಟಕ್ಕೆ ಹೋಗದಂತೆ ತಡೆಯಲಾಗಿದೆ. ಪೊಲೀಸ್ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ವಿರುದ್ದ ಅಟ್ರಾಸಿಟಿ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
300 ಜನ ಸೇರಿ ದಸರಾ ಮಾಡುತ್ತೇವೆ ಎನ್ನುವವರು 50 ಜನ ಸೇರಿ ಮಾಡುವ ಆಚರಣೆಗೆ ಏಕೆ ಅವಕಾಶ ನೀಡಿಲ್ಲ. ನಾಳೆ ನಾವು ವಿಡಿಯೋ ಮಾಡುತ್ತೇವೆ. ದಸರಾ ಆಚರಣೆಯಲ್ಲಿ 200 ಜನಕ್ಕೂ ಹೆಚ್ಚಿದ್ದರೆ ನಾವೇ ಜಿಲ್ಲಾಡಳಿತದ ಮೇಲೆ ಕೇಸ್ ಹಾಕ್ತೆವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಎರಡು ಬಾರಿ ಮನವಿ ಮಾಡಿದ್ದೇವೆ. ಹೀಗಿದ್ದರೂ, ಏಕೆ ನಮ್ಮನ್ನ ಕರೆದು ಸಾಧಕ ಬಾಧಕ ಚರ್ಚೆ ಮಾಡಲಿಲ್ಲ. ಈ ಹಿಂದೆ 6 ವರ್ಷ ಇದೇ ಜಿಲ್ಲಾಡಳಿತ ನಮಗೆ ಪೊಲೀಸ್ ಭದ್ರತೆ ನೀಡಿ ಮಹಿಷಾ ದಸರಾ ಆಚರಣೆ ಮಾಡಲು ಅವಕಾಶ ನೀಡಿತ್ತು. ಆದರೆ, ಈ ಬಾರಿ ಯಾವ ಕಾನೂನಿನಡಿ ನಮಗೆ ಅವಕಾಶ ನೀಡಿಲ್ಲ ಎಂದು ತಿಳಿಸಬೇಕು. ಜಿಲ್ಲಾಡಳಿತ ತಕ್ಷಣ ಇದಕ್ಕೆ ಪ್ರತಿಕ್ರಿಯೆ ನೀಡಬೇಕು. ಮೂಲ ನಿವಾಸಿಗಳು ನಾವು ಯಾರು ಮನುಷ್ಯರಾಗಿ ಕಾಣಲ್ವ ಎಂದು ಕಿಡಿಕಾರಿದ್ದಾರೆ.
key words : Shandu-inexhaustible-men-Leaving-caller-Purushottam-barrage-against-police