ಮುಂಬೈ, 06, 2020 (www.justkannada.in): ನಟಿ ಶಾನ್ವಿ ಶ್ರೀವಾಸ್ತವ್ ಅವರ ಫೇಸ್ ಬುಕ್ ಖಾತೆಯನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡಿದ್ದಾರೆ.
ತಮ್ಮ ಫೇಸ್ ಬುಕ್ ಖಾತೆಯ ಹ್ಯಾಕ್ ಆಗಿದೆ ಎಂದು ಶಾನ್ವಿ ಶ್ರೀವಾಸ್ತವ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಫೇಸ್ ಬುಕ್ ಖಾತೆ ಹ್ಯಾಕ್ ಆಗಿದ್ದು, ಇದನ್ನು ಆದಷ್ಟು ಬೇಗ ಸರಿ ಮಾಡಲಿರುವುದಾಗಿ ಶಾನ್ವಿ ತಿಳಿಸಿದ್ದಾರೆ.
ನನ್ನ ಖಾತೆ ಹ್ಯಾಕ್ ಆಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ನನ್ನ ಪ್ರೊಫೈಲ್ ನಿಂದ ಅವರು ಹಣ ಪಡೆಯುತ್ತಿದ್ದಾರೆ. ಫೇಸ್ ಬುಕ್ ಖಾತೆಯಲ್ಲಿ ನಮ್ಮ ಪೋಸ್ಟ್’ಗೆ ಬರುವ ಪ್ರತೀ ಲೈಕ್, ಫಾಲೋವರ್ಸ್ ಗಳಿಂದ ನಮಗೆ ಹಣ ಬರುತ್ತದೆ. ಇದನ್ನು ಗಮನಿಸಿರುವ ಹ್ಯಾಕರ್ಸ್ ಗಳು, ಖಾತೆಯನ್ನು ಹ್ಯಾಕ್ ಮಾಡಿದ್ದಾರೆ ಎಂದು ಶಾನ್ವಿ ತಿಳಿಸಿದ್ದಾರೆ.