ಬಾಗಲಕೋಟೆ,ಸೆಪ್ಟಂಬರ್, 27,2021(www.justkannada.in): ‘ನಾನು ಸಿಎಂ ಆಗಿದ್ದಾಗ ಕುರಿ ಸತ್ತರೆ 5 ಸಾವಿರ, ಎಮ್ಮೆ ಸತ್ತರೆ 10 ಸಾವಿರ ಪರಿಹಾರ ನೀಡುವುದನ್ನ ಆರಂಭಿಸಿದ್ದೆ. ಆದರೆ ಈ ಯೋಜನೆಯನ್ನ ಬಿಜೆಪಿಯವರು ನಿಲ್ಲಿಸಿದ್ದಾರೆ. ಪರಿಹಾರ ನೀಡಿದ್ರೆ ಅವರ ತಾತನ ಮನೆ ಗಂಟು ಹೋಗುತ್ತಾ..? ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜಕನೂರು ಸಿದ್ಧಶ್ರೀ ಉತ್ಸವದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಎಮ್ಮೆ ಕುರಿ ಸತ್ತರೆ ನೀಡುತ್ತಿದ್ದ ಪರಿಹಾರವನ್ನ ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ನಿಲ್ಲಿಸಿದ್ದಾರೆ. ಹೀಗಾಗಿ ಕುರಿ, ಎಮ್ಮೆ ಸತ್ತರೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದೇವೆ ಎಂದು ಆಗ್ರಹಿಸಿದರು.
ಪಶುಪಂಗೋಪನಾ ಸಚಿವರಿಗೆ ಕುರಿ ಕಾದು ಅನುಭವವಿಲ್ಲ. ಬಜೆಟ್ ಗಾತ್ರ ಎರಡು ಲಕ್ಷ ನಲವತ್ತಾರು ಸಾವಿರ ಕೋಟಿಯಿದೆ. ಅದರಲ್ಲಿ 100 ಕೋಟಿ ಪ್ರಾಣಿಗಳ ಪರಿಹಾರಕ್ಕೆ ಮೀಸಲಿಡಿ. ಪರಿಹಾರ ನೀಡಿದರೆ ಅವರ ತಾತನ ಮನೆ ಗಂಟು ಏನಾದ್ರೂ ಹೋಗುತ್ತಾ?’ ಎಂದು ಹರಿಹಾಯ್ದರು.
Key words: sheep -buffalo –died- compensation-Former CM- Siddaramaiah