ಬೆಂಗಳೂರು,ಫೆಬ್ರವರಿ,07,2021(www.justkannada.in) : ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಹೋರಾಟ ಚಿಟಕಿ ಹೊಡೆದಷ್ಟೇ ಸುಲಭದ ಕೆಲಸ. ಇದಕ್ಕೆ ಹೋರಾಟವೇಕೆ? ಯಾರ ವಿರುದ್ಧ ಎಂದು ಸಚಿವ ಕೆ.ಎಸ್.ಈಶ್ವರಪ್ಪ, ಬಿಜೆಪಿ ಸರ್ಕಾರವನ್ನು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಟೀಕಿಸಿದೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯ 25 ಸಂಸದರು, ಕ್ಯಾಬಿನೆಟ್ ಸಚಿವರ ಜೊತೆಗೆ ಕುರುಬ ಸಮುದಾಯ ಎಸ್ಟಿಗೆ ಸೇರ್ಪಡೆ ಹೋರಾಟದ ನೇತೃತ್ವವನ್ನು ಸಚಿವ ಕೆ.ಎಸ್.ಈಶ್ವರಪ್ಪ ವಹಿಸಿದ್ದಾರೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವುದು ಚಿಟಕಿ ಹೊಡೆದಷ್ಟೇ ಸುಲಭ. ಇದಕ್ಕೆ ಹೋರಾಟವೇಕೆ?. ಯಾರ ವಿರುದ್ಧ? ಇದಕ್ಕೆ ಉತ್ತರಿಸುವ ಧೈರ್ಯವಿದೆಯೇ ಎಂದು ಪ್ರಶ್ನಿಸಲಾಗಿದೆ.
key words : Shepherd-Community-ADDITION-ST-Fight-Against-whom?