ಮೈಸೂರು, ಜೂನ್ 06, 2021 (www.justkannada.in): ರಾಜೀನಾಮೆ ವಿತ್ ಡ್ರಾ ಮಾಡುವುದಾಗಿ ನಿರ್ಗಮಿತ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದ್ದಾರೆ.
ಇಂದು ಅಧಿಕಾರ ಹಸ್ತಾಂತರಿ ಮೈಸೂರು ಜನರಿಗೆ ನಮಸ್ಕಾರ ಎಂದು ಮಾತು ಆರಂಭಿಸಿದ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಆರ್ ಡಿಪಿಆರ್ ಇಲಾಖೆಗೆ ಹೋಗಿ ಸೋಮವಾರ ಅಧಿಕಾರ ಸ್ವೀಕಾರ ಮಾಡ್ತೀನಿ. ಕೆಲಸ ಒಬ್ಬರು ಅಲ್ಲದಿದ್ರೆ ಮತ್ತೊಬ್ಬರು ಮಾಡ್ತಾರೆ ಎಂದು ತಿಳಿಸಿದರು.
ಒಬ್ಬ ಅಧಿಕಾರಿಯಿಂದ ಹಾಳಾಗಬಾರದು ಅಂತಾ ಮಾತನಾಡಿದ್ದೆಎಂದು ರೋಹಿಣಿ ಸಿಂಧೂರಿ ಪ್ರಸ್ತಾಪಿಸಿದೆ ಆಕ್ರೋಶ ಹೊರಹಾಕಿದ ಶಿಲ್ಪಾ ನಾಗ್, ನಾನು ಯಾರ ಬಗ್ಗೆಯೂ ನೆಗೆಟಿವ್ ಮಾತನಾಡಿಲ್ಲ. ನಾನು ಮೈಸೂರು ಜಿಲ್ಲೆಗಾಗಿ ಕೆಲಸ ಮಾಡಿರೋದು. ಎಲ್ಲಾ ಪೈಲ್ ಕಾರ್ಫೊರೇಷನ್ ನಲ್ಲಿದೆ,ಯಾವುದೇ ತನಿಖೆ ಬೇಕಾದ್ರೂ ಮಾಡಲಿ ಎಂದು ತಿಳಿಸಿದರು.
ಎಲ್ಲರ ಒಡನಾಟದೊಂದಿಗೆ ಕೆಲಸ ಮಾಡಿದ್ದೇನೆ. ಮೈಸೂರಿನಲ್ಲಿ ಒಳ್ಳೆಯ ಅನುಭವವಿರುವ ಅಧಿಕಾರಿಗಳಿದ್ದಾರೆ. ಉದಾರ ಮನಸ್ಸಿಂದ ಹಲವರು ದಾನ ಮಾಡಿದ್ದಾರೆ. ಮೆಡಿಕಲ್ ಕಿಟ್ ಕೂಡ ನೀಡಿದ್ದಾರೆ. ಇದಕ್ಕೆ ಸಂಘ ಸಂಸ್ಥೆಗಳಿಗೆ ಧನ್ಯವಾದ ಹೇಳ್ತಿನಿ ಎಂದರು.
ಮಾಧ್ಯಮದವರು ಕೂಡ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಮೈಸೂರಿನ ಜನರು ಒಳ್ಳೆಯ ಅಧಿಕಾರಗಳ ಮೇಲೆ ನಂಬಿಕೆ ತೋರಿಸ್ತಾರೆ. ನಾವೂ ಎಸಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿಲ್ಲ. ಎಲ್ಲರೂ ಕೂಡ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಹನೆ ಕಟ್ಟೆಯ ಹೊಡೆದು ಈ ರೀತಿ ಮಾತನಾಡಿದೆ. ನನ್ನ ಕೆರಿಯರ್ ಹೋದ್ರೂ ಕೂಡ ಒಳ್ಳೆಯದಾಗಲಿ ಅಂತಾ ಮಾತನಾಡಿದೆ. ನನ್ನ ಬದಲಾವಣೆ ಜೊತೆಗೆ ಜಿಲ್ಲಾಡಳಿತದ ಬದಲಾವಣೆಗೆ ಆಗಿದೆ. ಇದನ್ನು ನಾನು ಸ್ವಾಗತಿಸ್ತೇನೆ ಎಂದು ತಿಳಿಸಿದರು.
ಅನ್ ನೆಸಸರಿ ನೋಟಿಸ್ ಕೊಡೋದು,ತಪ್ಪು ಅನ್ನೋ ಬಿಂಬಿಸುವ ಕಾರ್ಯ ನಡೀತು. ನೆನ್ನೆಯೂ ಕೂಡ ಯಾರನ್ನೂ ಮನೆಯನ್ನು ಕರೆಸಿಕೊಂಡು ಮಾತಾಡಿದ್ದಾರೆ. ಎಲ್ಲಾ ಮಾಹಿತಿಯನ್ನು ಕೂಡ ಕಳಿಸಿಕೊಟ್ಟಿದ್ದೇವೆ. ಮಾಹಿತಿ ಕೊಟ್ಟಿಲ್ಲ ಅಂತಾ ಹೇಳ್ತಾರೆ. ನಾವು ಎರಡನೇ ತಾರೀಖೆ ಮಾಹಿತಿ ಕೊಟ್ಟಿದ್ದಾನೆ. ನಂಗೆ ಬ್ಲಾಕ್ ಮಾರ್ಕ್ ಇಟ್ಟುಕೊಂಡು ಹೋಗಲೂ ಇಷ್ಟವಿಲ್ಲ. ಅದಕ್ಕೆ ನಾನು ಪ್ರತಿಯೊಂದಕ್ಕೂ ಲೆಕ್ಕ ಕೊಟ್ಟಿದ್ದೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದವಿದೆ. ಮೂರು ತಿಂಗಳು ಕೆಲಸ ಮಾಡಿದ್ದೆ. ಸರ್ಕಾರದ ನಿರ್ಧಾರ ಗೌರವಿಸುತ್ತೇನೆ ಎಂದರು.
ನಾನು ನನ್ನ ರಾಜೀನಾಮೆಯನ್ನ ವಾಪಸ್ ಪಡೆಯುತ್ತಿದ್ದೇನೆ.
ನಾನು ರಾಜೀನಾಮೆ ಕೊಟ್ಟಿದ್ದೆ ಒಂದೇ ಉದ್ದೇಶಕ್ಕೆ.
ಇಂತಹ ಅಧಿಕಾರಿಗಳು ಯಾವ ಜಾಗದಲ್ಲಿ ಇರಬಾರದು ಅಂತ.
ಆದರೆ ಇದೀಗಾ ನನ್ನ ಹಾಗೂ ಅವರ ವರ್ಗಾವಣೆ ಆಗಿದೆ. ಹೀಗಾಗಿ ನನ್ನ ರಾಜೀನಾಮೆ ನಿರ್ಧಾರವನ್ನ ವಾಪಾಸ್ ಪಡೆದಿದ್ದೇನೆ ಎಂದು ಮೈಸೂರಿನಲ್ಲಿ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹೇಳಿದರು.