ಬೆಂಗಳೂರು,ಫೆಬ್ರವರಿ,21,2022(www.justkannada.in): ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಇವರ ಹತ್ಯೆಯನ್ನು ಖಂಡಿಸಿ, ಅಪರಾಧಿಗಳ ಬಂಧನ ಮಾಡಲು ಆಗ್ರಹಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಮಯದಲ್ಲಿ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಬೆಂಗಳೂರು ಅಧ್ಯಕ್ಷ ಚಂದ್ರಶೇಖರ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ಮೋಹನ ಗೌಡ ಇವರು ಉಪಸ್ಥಿತಿ ಇದ್ದರು.
ಹರ್ಷ ಅವರ ಶವಯಾತ್ರೆಯ ಸಮಯದಲ್ಲಿ ಮುಸಲ್ಮಾನರು ಕಲ್ಲು ತೂರಾಟ ಮಾಡಿದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು. ಹಿಂದೂ ಕಾರ್ಯಕರ್ತ ಹರ್ಷ ಅವರ ಹತ್ಯೆ ಮಾಡಿದವರ ಕೂಡಲೇ ಬಂಧನ ಮಾಡಬೇಕು, ಇದರ ಹಿಂದೆ ಪೊಪ್ಯುಲರ್ ಪ್ರಂಟ್ ಆಪ್ ಇಂಡಿಯಾ ವನ್ನು ನಿಷೇಧ ಮಾಡಬೇಕು ಮತ್ತು ಹರ್ಷರವರ ಬಡ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಲಾಯಿತು.
ಇದೇ ಸಮಯದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್, , ಮಚ್ವು, ತಲ್ವಾರ ಹಿಡಿದು ಹೋರಾಟ ಮಾಡಲು ತಾಲಿಬಾನ್ ಅಲ್ಲ, ಇಲ್ಲಿ ಸಂವಿಧಾನ ಇದೆ, ನ್ಯಾಯಾಲಯದಲ್ಲಿ ಹೋರಾಟ ಮಾಡಿ. ಇಲ್ಲವಾದರೆ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
Key words: Shimoga-murder-case-CM Basavaraj bommai-pramod muthalik