“ಶಿವಮೊಗ್ಗ ಕಲ್ಲು ಗಣಿ ಸ್ಫೋಟ” : ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ವಿಷಾದ

ಬೆಂಗಳೂರು,ಜನವರಿ,22,2021(www.justkananda.in)  : ಶಿವಮೊಗ್ಗ ಹೊರವಲಯದ ಕಲ್ಲುಗಣಿಯಲ್ಲಿ ಸಂಭ‌ವಿಸಿದ ಭಾರೀ ಸ್ಫೋಟದಲ್ಲಿ ದೊಡ್ಡ ಪ್ರಮಾಣದ ಸಾವುನೋವು ಸಂಭವಿಸಿರುವ ಬಗ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.jk

ದೇವರು ಮೃತರ ಆತ್ಮಕ್ಕೆ ಸದ್ಗತಿ ನೀಡಲಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.

ಗಣಿಗಾರಿಕೆಗೆ ಬಳಸುವ ಸ್ಫೋಟಕಗಳನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು. ಎಚ್ಚರ ತಪ್ಪಿದರೆ, ಸ್ವಲ್ಪ ನಿರ್ಲಕ್ಷ ಮಾಡಿದರೂ ದುರಂತಕ್ಕೆ ಆಹ್ವಾನ ನೀಡಿದಂತೆಯೇ ಸರಿ ಎಂದಿದ್ದಾರೆ.

ಗಣಿಗಳಲ್ಲಿ ಬಳಸುವ ಸ್ಫೋಟಕ ಸಾಗಣೆ, ಸಂಗ್ರಹ ಮತ್ತು ಗಣಿಗಳಲ್ಲಿ ನಿಯಂತ್ರಿತವಾಗಿ ಸ್ಫೋಟಿಸುವ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇದೆ. ಯಾಕೆಂದರೆ ಇಂತಹ ದುರಂತವೇನಾದರು ಸಂಭವಿಸಿದರೆ ದೊಡ್ದ ಪ್ರಮಾಣದಲ್ಲಿ ಜೀವಹಾನಿ ಆಗುತ್ತದೆ. ಪರಿಸರಕ್ಕೆ ದಕ್ಕೆಯಾಗುತ್ತದೆ ಎಂದು ಹೇಳಿದ್ದಾರೆ.Shimoga,Rock mine,explosion,Union,Minister,DV Sadananda Gowda,regrets

ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಇರುವ ಮಾರ್ಗಸೂಚಿಗಳು ಚಾಚುತಪ್ಪದೆ ಅನುಷ್ಠಾನ ಆಗುವಂತೆ ನೋಡಿಕೊಳ್ಳಬೇಕು. ಘಟನಾ ನಂತರ ಇದಕ್ಕೆ ಕಾರಣವಾದವರನ್ನು ಶಿಕ್ಷಿಸುವುದು ಹಾಗೂ ಸಂತೃಸ್ತರಿಗೆ ಪರಿಹಾರ ನೀಡುವುದು ಒಂದು ಭಾಗ. ಆದರೆ, ಇಂತಹ ಘಟನೆಗಳು ನಡೆಯಂತೆ ನೋಡಿಕೊಂಡು ಜೀವಹಾನಿ ತಪ್ಪಿಸುವುದು ಹೆಚ್ಚು ಮುಖ್ಯ. ಇನ್ನು ಅಕ್ರಮ ಗಣಿಗಾರಿಕೆ ನಡೆಯುವುದಕ್ಕೆ ಅವಕಾಶವನ್ನೇ ನೀಡಬಾರದು ಎಂದು ತಿಳಿಸಿದ್ದಾರೆ.

key words : Shimoga-Rock mine-explosion-Union-Minister-DV Sadananda Gowda-regrets