ಇಂದಿನಿಂದ ಶಿರಡಿ ಶ್ರೀ ಸಾಯಿಬಾಬಾ ಮಂದಿರ ಆರಂಭ

ಶಿರಡಿ,ನವೆಂಬರ್,16,2020(www.justknnda.in) : ಕೊರೊನ ಭೀತಿಯಿಂದ ಸುಮಾರು 7 ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ಶಿರಡಿ ಶ್ರೀ ಸಾಯಿಬಾಬಾ ಮಂದಿರ ಕೊರೊನಾ ನಿಯಮಗಳ ಪಾಲನೆಯಂತೆ ತೆರೆಯಲಿದೆ.

kannada-journalist-media-fourth-estate-under-loss

ಆನ್‌ಲೈನ್‌ನಲ್ಲಿ ಬುಕಿಂಗ್ ಮಾಡಿದ ನಂತರವೇ ಭಕ್ತರು, ಸಂದರ್ಶಕರು ದೇವರ ದರ್ಶನಕ್ಕೆ ಆಗಮಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಕೋವಿಡ್ ನೆಗೆಟಿವ್ ಆರ್‌ಟಿ-ಪಿಸಿಆರ್ ರಿಸಲ್ಟ್ ಇರುವ ಪತ್ರ ತೋರಿಸಬೇಕು

“ಇಷ್ಟು ತಿಂಗಳುಗಳ ನಂತರ ಸರ್ಕಾರ ದೇವಾಲಯಗಳನ್ನು ತೆರೆಯಲು ನಮಗೆ ಅನುಮತಿ ನೀಡಿದೆ. ಇದಕ್ಕಾಗಿ ನಮಗೆ ಸಂತೋಷವಾಗಿದೆ. ದೇವಾಲಯಕ್ಕೆ ಭೇಟಿಗೆ ಬಯಸುವ ಭಕ್ತರು` ದರ್ಶನ’ಕ್ಕಾಗಿ ನಿಗದಿತ ಸಮಯದ ಸ್ಲಾಟ್ ಪಡೆಯಲು ಆನ್‌ಲೈನ್ ಬುಕಿಂಗ್ ಮಾಡಬೇಕಾಗುತ್ತದೆ.

ಗೇಟ್‌ನಲ್ಲಿ ಕೋವಿಡ್ ನೆಗೆಟಿವ್ ಆರ್‌ಟಿ-ಪಿಸಿಆರ್ ರಿಸಲ್ಟ್ ಇರುವ ಪತ್ರ ತೋರಿಸಬೇಕಾಗುವುದು. 65 ವರ್ಷ ಮೇಲ್ಪಟ್ಟವರಿಗೆ, ಎಂಟರಿಂದ ಹತ್ತು ವರ್ಷದ ಮಕ್ಕಳಿಗೆ ಅವಕಾಶ ನೀಡಲಾಗುವುದಿಲ್ಲ “ಎಂದು ದೇವಾಲಯ ನಿರ್ವಹಣೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ದಿನಕ್ಕೆ 6,000, ಗಂಟೆಗೆ 900 ಭಕ್ತರಿಗೆ ಮಾತ್ರ ಅವಕಾಶ

 Shirdi-Shree-Sai Baba-Mandir-started-today

ವರದಿಯಂತೆ ಸೋಮವಾರ ಕಾಕಡ್ ಆರತಿ ನಂತರ ಸಾಯಿಬಾ ದರ್ಶನ ಭಕ್ತರಿಗೆ ಲಭಿಸಲಿದೆ. ದಿನಕ್ಕೆ 6,000, ಗಂಟೆಗೆ 900 ಭಕ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಅಗತ್ಯ ಸಾಮಾಜಿಕ ಅಂತರದ ಜತೆಗೆ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

key words : Shirdi-Shree-Sai Baba-Mandir-started-today