ಗದಗ,ಜೂನ್,25,2022(www.justkannada.in): ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇನ್ನೆರೆಡು ದಿನದಲ್ಲಿ ಶಿವಸೇನೆ ಖಾಲಿಯಾಗುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಗದಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಪ್ರಹ್ಲಾದ್ ಜೋಶಿ, ಸಿಎಂ ಉದ್ಧವ್ ಠಾಕ್ರೆ ತಪ್ಪಿನಿಂದ ಇಡೀ ಪಕ್ಷವೇ ಅಸಮಾಧಾನಗೊಂಡಿದೆ. ಶಿವಸೇನೆಯ ಒಳಜಗಳವೇ ಮಹಾಬಿಕ್ಕಟಿಗೆ ಕಾರಣ. ಇದಕ್ಕೆ ಶಿವಸೇನೆ ಶಾಸಕರು ಬರೆದಿರುವ ಪತ್ರವೇ ಸಾಕ್ಷಿ ಎಂದರು.
ಎರಡು ದಿನ ತಡೆದ್ರೆ ಉಳಿದವರು ಪಕ್ಷದಿಂದ ಹೊರಹೋಗುವ ಸಾಧ್ಯತೆ ಇದೆ. ಉದ್ಧವ್ ಠಾಕ್ರೆ ಮತ್ತು ಆದಿತ್ಯ ಬಿಟ್ಟು ಉಳಿದವರು ಹೊರಹೋಗುವ ಸಾಧ್ಯತೆ ಇದೆ. ಎನ್ ಸಿಪಿ ಕೈಯಲ್ಲಿ ರಿಮೋಟ್ ಕಂಟ್ರೋಲ್ ಇದೆ ಎಂದು ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
Key words: Shiv Sena – depleted – two days- Union Minister- Prahlad Joshi.