ಮೈಸೂರು,ಫೆಬ್ರವರಿ,17,2025 (www.justkannada.in): ಛತ್ರಪತಿ ಶಿವಾಜಿ ಮಹಾರಾಜರ 398 ನೇ ಜಯಂತೋತ್ಸವ ಸಮಿತಿ ವತಿಯಿಂದ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಫೆ.19ರಂದು ಮೈಸೂರಿನಲ್ಲಿ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕುರಿತು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ದಿ ಮೈಸೂರು ಸಿಟಿ ಶ್ರೀ ಶಿವಛತ್ರಪತಿ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ನಾಗೇಂದ್ರ ರಾವ್ ಅವರು, ಅಂದಿನ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಕೆ.ಹರೀಶ್ ಗೌಡ ಸೇರಿ ಅನೇಕ ಗಣ್ಯರು ಭಾಗವಹಿಸುವರು. ಈ ಬಗ್ಗೆ ಈಗಾಗಲೇ ಸೊಸೈಟಿಯಿಂದ ಸಮುದಾಯದ ಎಲ್ಲರಿಗೂ ನೇರವಾಗಿ ಆಹ್ವಾನ ಪತ್ರ ನೀಡಿ ಆಹ್ವಾನಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಸ್ವಾಗತ, ಹಣಕಾಸು, ಪ್ರಚಾರ, ಅಲಂಕಾರ, ಮೆರವಣಿಗೆ, ಸಾಂಸ್ಕೃತಿಕ ಹಾಗೂ ಆಹಾರ ಸಮಿತಿಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.
ಸೊಸೈಟಿಯ ಗೌರವಾಧ್ಯಕ್ಷ ಈ. ಮಾರುತಿರಾವ್ ಪವಾರ್, ಪ್ರಧಾನ ಕಾರ್ಯದರ್ಶಿ ಎಸ್.ವೆಂಕೋಬರಾವ್ ಕಿರ್‌ದಂತ್, ಖಜಾಂಚಿ ರಾವ್, ಸಂಚಾಲಕ ಜ್ಞಾನ ಪ್ರಕಾಶ್ ಪವಾರ್ ಇನ್ನಿತರರು ಉಪಸ್ಥಿತರಿದ್ದರು.
Key words: Chhatrapati Shivaji Jayanti, celebrated, Mysore, Feb. 19