ಶಾಸಕ ಯತ್ನಾಳ್ ಉಚ್ಚಾಟನೆ ಮಾಡಿ BJP ದೊಡ್ಡ ತಪ್ಪು ಮಾಡಿದ್ರು- ಸಚಿವ ಶಿವರಾಜ ತಂಗಡಗಿ

ಕೊಪ್ಪಳ,ಮಾರ್ಚ್,29,2025 (www.justkannada.in): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಬಲ ನಾಯಕ ಸಂಘಟನಾ ಚತುರ. ಅವರನ್ನು ಉಚ್ಚಾಟಿಸಿ ಬಿಜೆಪಿ ದೊಡ್ಡ ತಪ್ಪು ಮಾಡಿದೆ. ಬಿಜೆಪಿ  ಪಕ್ಷದೊಳಗಿನ ಭ್ರಷ್ಟಾಚಾರವನ್ನು ಯತ್ನಾಳ್ ಹೊರ ತಂದರು.  ಲಿಂಗಾಯತರ ಹೆಸರಲ್ಲಿ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ ರಾಜಕಾರಣ ಮಾಡಿದರು ಎಂದು ಕಿಡಿಕಾರಿದರು.

ಹನಿಟ್ರ್ಯಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಿವರಾಜ ತಂಗಡಗಿ, ಇದು  ಒಳ್ಳೆಯ ಬೆಳವಣಿಗೆ ಅಲ್ಲ. ಇದು ಜನಪ್ರತಿನಿಧಿಗಳ ಗೌರವ ಕಡಿಮೆ ಮಾಡುವಂತಹ ಕೆಲಸ.  ತಪ್ಪು ಮಾಡಿದವರ ವಿರುದ್ದ ದೂರು ನೀಡಲಿ ತನಿಖೆ ಮಾಡುತ್ತಾರೆ. ಈ ಬಗ್ಎಗ ನಮಗೂ ಮಾಹಿತಿ ಇಲ್ಲ. ಕೆ.ಎನ್ ರಾಜಣ್ಣನವರನ್ನೇ ಈ ಬಗ್ಗೆ ಕೇಳಬೇಕು ಎಂದರು.

Key words: BJP, mistake, expelling, MLA, Yatnal , Minister,  Shivraj Thangadagi