ಬೆಂಗಳೂರು, ಅಕ್ಟೋಬರ್ 07, 2021 (www.justkannada.in): ದುನಿಯಾ ಸೂರಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ.
‘ಟಗರು’ ಚಿತ್ರದೊಂದಿಗೆ ಮ್ಯಾಜಿಕ್ ಮಾಡಿದ ನಿರ್ದೇಶಕ ದುನಿಯಾ ಸೂರಿ ಮತ್ತೊಮ್ಮೆ ಹ್ಯಾಟ್ರಿಕ್ ಹೀರೋ ಆ್ಯಕ್ಸನ್ ಕಟ್ ಹೇಳಲಿದ್ದಾರೆ.
ಶಿವಣ್ಣ ಜೊತೆ ಹೊಸ ಪ್ರಾಜೆಕ್ಟ್ ಮಾಡಲು ದುನಿಯಾ ಸೂರಿ ಪ್ಲಾನ್ ಮಾಡಿದ್ದಾರೆ. ಹೊಸ ಪ್ರಾಜೆಕ್ಟ್ಗಾಗಿ ನಿರ್ದೇಶಕ ಸೂರಿ ಮಾತುಕತೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಶೀಘ್ರದಲ್ಲಿ ಭೇಟಿ ಮಾಡ್ತೇವೆ ಹಾಗೂ ಹೊಸ ಚಿತ್ರದ ಬಗ್ಗೆ ಚರ್ಚಿಸಲಿದ್ದೇವೆ ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅಂದಹಾಗೆ ಸೂರಿ ಜೊತೆ ಶಿವಣ್ಣ ಮಾಡಿದ ಕಡ್ಡಿಪುಡಿ ಹಾಗೂ ಟಗರು ಎರಡು ಚಿತ್ರಗಳು ಬೆಳ್ಳಿತೆರೆಮೇಲೆ ಮ್ಯಾಜಿಕ್ ಮಾಡಿದ್ದವು.