ಬೆಂಗಳೂರು, ಫೆ.೧೩, ೨೦೨೫: ಕರ್ನಾಟಕದಲ್ಲಿ ಜಮೀನಿನ ಬೆಲೆ ತಾರಕಕ್ಕೇರಿದ್ದು, ಕೈಗಾರಿಕಾ ಹೂಡಿಕೆಗೆ ಇದು ಸವಾಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ಜಮೀನನ್ನು ಖರೀದಿಸುವುದು ಕಷ್ಟವಾಗಿದೆ. ಎಷ್ಟೋ ಸಲ ಯೋಜನೆಯ ಹೂಡಿಕೆಗಿಂತ ಇದರ ವೆಚ್ಚವೇ ಜಾಸ್ತಿಯಾಗುತ್ತಿದೆ ಎನ್ನುವ ಉದ್ಯಮಿಗಳ ಕಳವಳ ಅರ್ಥವಾಗುತ್ತದೆ. ರಾಜ್ಯ ಸರಕಾರ ಇದನ್ನು ಬಗೆಹರಿಸಿದರೆ, ಕೇಂದ್ರ ಸರಕಾರವು ಕ್ಲಸ್ಟರ್ ಮಾದರಿಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಸಂಪೂರ್ಣ ಸಹಕಾರ ಕೊಡಲಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಜಾಗತಿಕ ಹೂಡಿಕದಾರರ ಸಮಾವೇಶದಲ್ಲಿ ಅವರು ಗುರುವಾರ ರಾಜ್ಯದ 30ಕ್ಕೂ ಹೆಚ್ಚು ಸಾಧಕ ಎಂಎಸ್ಎಂಇ ಉದ್ಯಮಿಗಳಿಗೆ `ಎಸ್ಎಂಇ ಕನೆಕ್ಟ್ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅವರು ಕರ್ನಾಟಕದಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಸೌದಿ ಅರೇಬಿಯಾ, ದೋಹಾ, ದುಬೈ ಮುಂತಾದವುಗಳೊಂದಿಗೆ ಮಾಡಿಕೊಂಡ 820 ಕೋಟಿ ರೂ. ಹೂಡಿಕೆ, ಕೆಎಲ್ಇ ಸೊಸೈಟಿ ಶಿವಶಕ್ತಿ ಶುಗರ್ಸ್ ಕಾರ್ಖಾನೆಗೆ ಮಾಡುತ್ತಿರುವ 1,000 ಕೋಟಿ ರೂ. ಹಾಗೂ ಇನಾಂದಾರ್ ಶುಗರ್ಸ್ ಸಂಸ್ಥೆಯ 250 ಕೋಟಿ ರೂ. ಮೊತ್ತದ ಹೂಡಿಕೆ ಒಡಂಬಡಿಕೆಗಳನ್ನು ಪ್ರದರ್ಶಿಸಲಾಯಿತು.
ದೇಶದ ಜಿಡಿಪಿಗೆ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಪಾಲು ಶೇ.30ರಷ್ಟಿದ್ದು, ಇಲ್ಲಿ 25 ಕೋಟಿ ಉದ್ಯೋಗಿಗಳಿದ್ದಾರೆ. ಕಳೆದ 10 ವರ್ಷಗಳಲ್ಲಿ ಈ ವಲಯದ 7 ಲಕ್ಷ ಉದ್ಯಮಗಳಿಗೆ 27.5 ಲಕ್ಷ ಕೋಟಿ ರೂ. ಸಾಲ ಕೊಡಲಾಗಿದೆ. ಅಲ್ಲದೆ, ಎಂಎಸ್ಎಂಇ ನೀತಿಯನ್ನು ಬದಲಿಸಿದ್ದು, ಹೊಸದಾಗಿ ವರ್ಗೀಕರಣ ಮಾಡಲಾಗಿದೆ. ಸೂಕ್ಷ್ಮ ಕೈಗಾರಿಕೆಗಳ ವಾರ್ಷಿಕ ವಹಿವಾಟು ಮಿತಿಯನ್ನು 10 ಕೋಟಿ ರೂ.ಗಳಿಗೆ, ಸಣ್ಣ ಕೈಗಾರಿಕೆಗಳ ಮಿತಿಯನ್ನು 100 ಕೋಟಿ ರೂ.ವರೆಗೆ ಮತ್ತು ಮಧ್ಯಮ ಕೈಗಾರಿಕೆಗಳ ಮಿತಿಯನ್ನು 500 ಕೋಟಿ ರೂ.ವರೆಗೆ ಏರಿಸಲಾಗಿದೆ ಎಂದು ಅವರು ನುಡಿದರು.
ಕರ್ನಾಟಕದಲ್ಲಿ ಕೃಷಿ ಮತ್ತು ಕೈಗಾರಿಕೆ ಬೆಳವಣಿಗೆ ಎರಡನ್ನೂ ಪರಿಗಣಿಸಬೇಕಾಗಿದೆ. ರಾಜ್ಯದಲ್ಲಿ ಆಹಾರ ಸಂಸ್ಕರಣೆ, ಸೇವನೆಗೆ ಸಿದ್ಧವಾಗಿರುವ ಮತ್ತು ಸಿದ್ಧಪಡಿಸಲು ಸಿದ್ಧವಾಗಿರುವ ಆಹಾರ (ರೆಡಿ ಟು ಈಟ್ & ರೆಡಿ ಟು ಕುಕ್ ಫುಡ್) ಉದ್ಯಮ ಬೆಳೆಸಲು ಹೇರಳ ಅವಕಾಶಗಳಿವೆ. ವಿದೇಶಗಳ ಜನರು ನಮ್ಮಿಂದ ಡಿಜಿಟಲ್ ತಂತ್ರಜ್ಞಾನ ಮತ್ತು ಕೌಶಲ್ಯಪೂರ್ಣ ಉದ್ಯೋಗಿಗಳನ್ನು ಬಯಸುತ್ತಿದ್ದಾರೆ. ಯುವಜನರಿಗೆ ನಾವು ಕೌಶಲ್ಯ ಕೊಡುವತ್ತ ಒತ್ತು ಕೊಡಬೇಕು ಎಂದು ಕರಂದ್ಲಾಜೆ ವಿವರಿಸಿದರು.
ನಗರಕ್ಕೆ 6 ಟಿಎಂಸಿ ಕಾವೇರಿ ನೀರು: ಡಿ.ಕೆ.ಶಿವಕುಮಾರ್
ಬೆಂಗಳೂರು ನಗರದಲ್ಲಿ ಉದ್ಯಮಗಳಿಗೆ ನೀರಿನ ಅಗತ್ಯವಿದೆ. ಕಾವೇರಿ ನದಿಯಿಂದ ಇನ್ನೂ 6 ಟಿಎಂಸಿ ನೀರನ್ನು ಯಾವ ಬೆಲೆ ತೆತ್ತಾದರೂ ತರಲಾಗುವುದು. ನೀರಾವರಿ ಖಾತೆಯೂ ನನ್ನ ಬಳಿಯೇ ಇದೆ. ಜತೆಗೆ ಇಲ್ಲಿನ ಸಂಚಾರ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ಇನ್ನೊಂದೆಡೆಯಲ್ಲಿ ಉದ್ಯಮಿಗಳು ಸರಕಾರದ ಬಿಯಾಂಡ್ ಬೆಂಗಳೂರು ಯೋಜನೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಸಚಿವರಾದ ಎಂ ಬಿ ಪಾಟೀಲ ಮಾತನಾಡಿದರು. ಸಚಿವ ರಾಮಲಿಂಗಾ ರೆಡ್ಡಿ, ಚೆಲುವರಾಯಸ್ವಾಮಿ, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಉಪಸ್ಥಿತರಿದ್ದರು.
ಕ್ವಿನ್ ಸಿಟಿಯಲ್ಲಿ ಕೆಎಲ್ಇ 1,000 ಕೋಟಿ ರೂ. ಹೂಡಿಕೆ: ಪ್ರಭಾಕರ ಕೋರೆ
ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಅಗತ್ಯವಿರುವ ಶಿಕ್ಷಣ, ಸೇವೆ ಮತ್ತು ಸಂಶೋಧನೆಗಳಿಗೆ ಕ್ವಿನ್ ಸಿಟಿಯಲ್ಲಿ ಮುಂದಿನ 5 ವರ್ಷಗಳಲ್ಲಿ 1,000 ಕೋಟಿ ರೂ. ಹೂಡುವುದಾಗಿ ಬೆಳಗಾವಿಯ ಕೆಎಲ್ಇ ಸೊಸೈಟಿ ಹೇಳಿದೆ. ಇದರಿಂದ 1,500 ಉದ್ಯೋಗಗಳು ಸೃಷ್ಟಿಯಾಗಲಿದ್ದು, ಇದು ಕ್ವಿನ್ ಸಿಟಿಗೆ ಘೋಷಣೆಯಾಗಿರುವ ಪ್ರಪ್ರಥಮ ಹೂಡಿಕೆಯಾಗಿದೆ. ಮಿಕ್ಕಂತೆ, ಸವದತ್ತಿಯ ಶಿವಶಕ್ತಿ ಶುಗರ್ಸ್ ಮತ್ತು ಇನಾಂದಾರ್ ಶುಗರ್ಸ್ ಕಾರ್ಖಾನೆಗಳು ಸಕ್ಕರೆ ಮತ್ತು ಎಥೆನಾಲ್ ಉತ್ಪಾದನೆಗೆ ಮುಂದಿನ 2 ವರ್ಷಗಳಲ್ಲಿ ಕ್ರಮವಾಗಿ 1,000 ಕೋಟಿ ರೂ. ಮತ್ತು 250 ಕೋಟಿ ರೂ. ಹೂಡಿಕೆ ಮಾಡಲಿವೆ. ಸರಕಾರದ ಪರವಾಗಿ ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಮೂರೂ ಸಂಸ್ಥೆಗಳ ಅಧ್ಯಕ್ಷರಾಗಿರುವ ಡಾ.ಪ್ರಭಾಕರ ಕೋರೆ ಗುರುವಾರ ಒಡಂಬಡಿಕೆಗಳಿಗೆ ಅಂಕಿತ ಹಾಕಿದರು.
key words: Cluster model industries, land issues, resolved, Union Minister Shobha Karandlaje
SUMMARY:
Shobha Karandlaje Pledges Central Support for Cluster Model Industrial Growth in Karnataka
Bengaluru: The rising land prices in Karnataka have become a challenge for industrial investment, making it difficult for businesses to acquire land for their operations. Entrepreneurs have voiced concerns that land acquisition costs are often higher than the actual investment required for the projects themselves. Addressing this, Union Minister for Labour and Employment and Minister for Micro, Small, and Medium Enterprises (MSMEs), Shobha Karandlaje, on Thursday, assured full support from the central government for industrial growth through a cluster model, provided the state government addresses the land-related issues.
Speaking at the “SME Connect Awards” event, as part of the GIM Invest Karnataka 25, Karandlaje urged the state government to resolve these issues to boost industrial development. She presented the “SME Connect Awards” to over 30 successful MSMEs in the state during the event.
Karandlaje highlighted the successful agreements with international investors during her speech. Karnataka has secured investments of Rs 820 crore from the UAE, including Saudi Arabia, Doha, and Dubai. Additionally, the KLE Society’s Shivashakti Sugars Factory is receiving a Rs 1,000 crore investment, and Rs 250 crore has been invested in Inandar Sugars.
The minister also discussed how MSMEs contribute to the country’s GDP, accounting for approximately 30% and providing employment to over 25 crore people. Over the past decade, Rs 27.5 lakh crore in loans have been provided to 7 lakh MSMEs across India.
She noted that the MSME policy has been revised, with new classifications introduced. The turnover limit for micro enterprises has been raised to Rs 10 crore, for small enterprises to Rs 100 crore, and for medium enterprises to Rs 500 crore.
Opportunities in food processing and skill development
Karandlaje emphasised the need to consider both agriculture and industrial development in Karnataka. The state has immense potential in food processing, particularly for ready-to-eat and ready-to-cook food products. She noted that foreign markets are increasingly seeking digital technologies and skilled workers from Karnataka, and the government needs to focus on equipping youth with the necessary skills to meet these global demands.
Cauvery Water for Bengaluru’s industries: D K Shivakumar
On the infrastructure front, Karnataka’s Deputy Chief Minister D.K. Shivakumar highlighted the need for more water to support industries in Bengaluru. He assured that an additional 6 tmc of water would be sourced from the Cauvery River to meet the demand. Shivakumar also emphasised that the state is working to resolve the city’s traffic congestion issues. He urged entrepreneurs to actively participate in the government’s ‘Beyond Bengaluru’ initiative, which encourages industrial development outside the city.
KLE Society’s Rs 1,000 crore investment in KWIN City
In a significant announcement, the KLE Society disclosed a Rs 1,000 crore investment plan for healthcare services, education, and research in KWIN City over the next five years. This investment will create 1,500 new jobs and is the first major investment commitment to the KWIN City project. The investment agreements were signed in the presence of industry officials, including Selvakumar, Principal Secretary of the Industry Department, and Dr. Prabhakar Kore, chairman of the companies involved.
Investments in sugar and ethanol production
Meanwhile, Shivashakti Sugars in Savadatti and Inandar Sugars have announced investments of Rs 1,000 crore and Rs 250 crore, respectively, over the next two years to increase sugar and ethanol production. These agreements were signed on Thursday in the presence of government officials and company representatives.
Governor Thaawar Chand Gehlot, Ministers MB Patil, Ramalingareddy, and Chaluvaraya Swamy were also present.