ಮೈಸೂರು,ಫೆಬ್ರವರಿ,6,2025 (www.justkannada.in): ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಕೇಂದ್ರ ಸರ್ಕಾರ ಅರ್ಜುನ್ ಪ್ರಶಸ್ತಿಯನ್ನು ನೀಡುತ್ತದೆ. ಅದೇ ರೀತಿ ರಾಜ್ಯ ಸರ್ಕಾರ ಕೂಡ ಏಕಲವ್ಯ ಪ್ರಶಸ್ತಿಯನ್ನು ನಿಲ್ಲಿಸಿರುವುದನ್ನು ಮುಂದುವರಿಸಲಿ ಎಂದು ಅರ್ಜುನ್ ಕ್ರೀಡಾ ಪ್ರಶಸ್ತಿ ಪುರಸ್ಕೃತರು ರಾಷ್ಟ್ರೀಯ ಖೋಖೋ ಆಟಗಾರರು ಶೋಭಾ ನಾರಾಯಣ್ ತಿಳಿಸಿದರು.
ಇಂದು ಮೈಸೂರು ಜಿಲ್ಲಾ ಕ್ರೀಡಾ ಸಾಂಸ್ಕೃತಿಕ ವೇದಿಕೆ ವಿಶ್ವಕಪ್ ಖೋ ಖೋ ಸಾಧಕರಾದ ಮೈಸೂರು ಜಿಲ್ಲೆಯ ಕುರುಬೂರಿನ ಬಿ ಚೈತ್ರಾ ಹಾಗೂ ಹಾಗೂ ಮಂಡ್ಯ ಜಿಲ್ಲೆಯ ಎಂ.ಕೆ ಗೌತಮ್ ಅವರಿಗೆ ಅಭಿನಂದಿಸಿ ಮಾತನಾಡುತ್ತ ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿ ಮಾತನಾಡಿದ ಡಾ. ಉಷಾ ಹೆಗಡೆ, ಚೈತ್ರಾ ಚಿಕ್ಕವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ರೀತಿ ಅವರ ಸಾಧನೆ ಮುಂದುವರಿಸಲಿ ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ಯಾವುದೇ ಆಟಗಳಿರಲಿ ಅದು ಜಾತಿ , ಪಕ್ಷವನ್ನ ಮೀರಿದ ವ್ಯವಸ್ಥೆ. ಅದಕ್ಕಾಗಿ ಪಕ್ಷಾತೀತವಾಗಿ ಸಂಘಟನೆಗಳು ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿಶ್ವಕಪ್ ಖೋ ಖೋ ಪಂದ್ಯದಲ್ಲಿ ಗೆದ್ದು ಭಾರತ ದೇಶಕ್ಕೆ ಕೀರ್ತಿ ತಂದ ಹಳ್ಳಿಯ ಸಾಮಾನ್ಯ ಕುಟುಂಬದ ಕುರುಬೂರಿನ ಚೈತ್ರಾ ಸಾಧನೆ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ. ರಾಜ್ಯ ಸರ್ಕಾರ ಇಂತಹ ಪ್ರತಿಭೆಗೆ ನಿರಂತರವಾಗಿ ಪ್ರೋತ್ಸಾಹಿಸಲು ಉತ್ತಮ ದರ್ಜೆಯ ಸರ್ಕಾರಿ ಉದ್ಯೋಗವನ್ನು ನೀಡಿ ಗೌರವಿಸಬೇಕು. ಕುಟುಂಬಕ್ಕೆ ಅನುಕೂಲವಾಗಲು ಮೈಸೂರಿನಲ್ಲಿ ಉಚಿತವಾಗಿ ಉತ್ತಮ ನಿವೇಶನವನ್ನು ನೀಡಬೇಕು. ಮುಂದಿನ ಪೀಳಿಗೆಗೆ ಇವರ ಸಾಧನೆ ತಿಳಿಯುವಂತಾಗಲು ಶಾಶ್ವತವಾಗಿ ಇವರ ಹೆಸರಿನಲ್ಲಿ ರಾಜ್ಯಮಟ್ಟದಲ್ಲಿ ಆಟಗಾರರಿಗೆ ಚೈತ್ರ ಹೆಸರಿನಲ್ಲಿ ಪಾರಿತೂಷಕ ನೀಡುವ ಯೋಜನೆ ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಖೋಖೋ ಫೆಡರೇಶನ್ ಅಧ್ಯಕ್ಷ ಡಾ ಸಿ ಕೃಷ್ಣ, ಕನ್ನಡ ಸಾಹಿತ್ಯ ಕಲಾ ಕೂಟ ಅಧ್ಯಕ್ಷ ಎಂ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಹೆಳವರಹುಂಡಿ ಸಿದ್ದಪ್ಪ, ವಾಣಿಜ್ಯ ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಕೆ ಬಿ ನಿಂಗರಾಜು, ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಕ್ರೀಡಾ ಸುದ್ದಿ ವಾಹಿನಿ ಮುಖ್ಯಸ್ಥ ಏನ್ ಬಿ ಆರಾಧ್ಯ, ಇನ್ನರ್ವೆಲ್ ಉಪಾಧ್ಯಕ್ಷರಾದ ಶಾಂತಕೃಷ್ಟ, ಜೀವದಾರ ರಕ್ತ ನಿಧಿ ಗಿರೀಶ್, ಶಿಕ್ಷ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಪಿ ದೇವರಾಜು .ಡಿ ಎನ್ ಲೋಕಪ್ಪ, ಎಸ್ ರಾಮಪ್ರಸಾದ್ ಎಮ್ ಆರ್ ಚೌದ್ರಿ, ಅತ್ತಳ್ಳಿ ದೇವರಾಜ್, ಬರಡಪುರ ನಾಗರಾಜ್, ಕಿರಗಸೂರ ಶಂಕರ್, ಪಿ ಸೋಮಶೇಖರ್ ಉಪಸ್ಥಿತರಿದ್ದರು.
Key words: scheme, Eklavya Award, good athletes, continued, Shobha Narayan