ನವದೆಹಲಿ, ಮಾರ್ಚ್ 13, 2022 (www.justkannada.in): ಬೆಂಗಳೂರು ಸೇರಿ ರಾಜ್ಯದಲ್ಲಿ ಚಿಕನ್ ಮಾಂಸದ ಮಾರಾಟ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದೆ.
ಕೆಲವು ದಿನಗಳ ಹಿಂದೆ 200 ರೂಪಾಯಿ ಒಳಗಿದ್ದ ಚಿಕನ್ ಬೆಲೆ ಇದೀಗ 200ರ ಗಡಿ ದಾಟಿ 300 ರೂಪಾಯಿಯ ಆಸುಪಾಸಿಗೆ ಬಂದಿದೆ.
ಬೇಡಿಕೆಗೆ ಪೂರಕವಾಗಿ ಉತ್ಪಾದನೆ ಹಾಗೂ ಪೂರೈಕೆ ಇಲ್ಲದೆ ಇರುವುದರಿಂದ ಕೋಳಿ ಮಾಂಸದ ಬೆಲೆ ಗಗನಕ್ಕೇರಿದೆ.
ಕೆಲ ದಿನಗಳಿಂದ ಸಾಮಾನ್ಯವಾಗಿದ್ದ ಕೋಳಿ ಮಾಂಸದ ದರ ಹೆಚ್ಚಳಕ್ಕೆ ಪೂರೈಕೆ ಕಡಿಮೆ ಆಗಿರುವುದು ಕಾರಣ ಎನ್ನಲಾಗಿದೆ.