ದೇಶದ ಜನತೆಗೆ ಮತ್ತೆ ಎಲ್ ಪಿಜಿ  ಸಿಲಿಂಡರ್ ದರ ಏರಿಕೆ ಶಾಕ್.

ನವದೆಹಲಿ.ಅಕ್ಟೋಬರ್,6,2021(www.justkannada.in): ದೇಶದ ಜನರಿಗೆ ಮತ್ತೆ ಎಲ್ ಪಿಜಿ  ಸಿಲಿಂಡರ್ ದರ  ಏರಿಕೆಯ ಶಾಕ್ ತಟ್ಟಿದೆ.  ಹೌದು ಎಲ್ ಪಿಜಿ ಅಡುಗೆ ಅನಿಲ ಬೆಲೆಯನ್ನು ಮತ್ತೆ 15 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಪೆಟ್ರೋಲಿಯಂ ಕಂಪನಿಗಳು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 15 ರೂ. ಹೆಚ್ಚಳ ಮಾಡಿವೆ.  ದೇಶಾದ್ಯಂತ ಇಂದಿನಿಂದಲೇ ಹೊಸ ದರ ಜಾರಿಯಾಗಲಿದ್ದು, ಬೆಲೆ ಏರಿಕೆ ಬಳಿಕ ಕರ್ನಾಟಕದಲ್ಲಿ ಸಿಲಿಂಡರ್ ದರ ರೂ.902.5 ರೂ ಆಗಲಿದೆ.

ದಿನೇ ದಿನೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿದ್ದು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

Key words: Shock –LPG- cylinder- hike- again – people – country.

ENGLISH SUMMARY…

Price of LPG cylinder hiked yet again!
New Delhi, October 6, 2021 (www.justkannada.in): The Govt. of India has given yet another shock to the people of the country, by increasing the price of LPG cylinders by Rs. 15.
The petroleum companies have increased the price of each LPG cylinder by Rs. 15, which will be effective from today itself across the country. Accordingly, the price of one household LPG cylinder in Karnataka will be Rs. 902.50. The price of one 14.2 kg LPG cylinder in New Delhi is Rs. 899.50.
The people of the country are already in deep trouble following the constant increasing prices of fuel and are cursing the Govt. of India for the same.
Keywords: Govt. of India/ LPG cylinder/ price hike again