ಬೆಂಗಳೂರು,ಜನವರಿ,18,2022(www.justkannada.in): ಕೊರೊನಾ ಸಂಕಷ್ಟದ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರಿಗೆ ಇದೀಗ ಹಾಲಿನ ದರ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದೆ.
ಲೀಟರ್ ಹಾಲಿನ ದರ 2 ರೂಪಾಯಿ ಏರಿಕೆ ಮಾಡಲು ಕೆಎಂಎಫ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜತೆ ಚರ್ಚೆ ಬಳಿಕ ಅಂತಿಮ ತೀರ್ಮಾನ ಮಾಡಲು ನಿರ್ಧರಿಸಿದೆ. ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಲಿನ ದರ ಏರಿಕೆ ಮಾಡುವ ಸಂಬಂಧ ಪ್ರಸ್ತಾಪ ಮಾಡಲಾಗಿದ್ದು ಒಕ್ಕೂಟಗಳ ಜತೆ ಸಭೆಯ ಬಳಿಕ ಸಿಎಂ ಬೊಮ್ಮಾಯಿ ಜತೆ ಚರ್ಚಿಸುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ ಎನ್ನಲಾಗಿದೆ.
ಕಳೆದ 3 ವರ್ಷಗಳಿಂದ ಹಾಲಿನ ದರ ನಿರಂತರವಾಗಿ ಏರಿಕೆಯಾಗುತ್ತಿದೆ. 2019ರಲ್ಲಿ 3 ಬಾರಿ ಹಾಲಿನ ದರ ಏರಿಕೆ ಮಾಡಲಾಗಿತ್ತು. ಮೊದಲು 2019ರ ಫೆಬ್ರವರಿಯಲ್ಲಿ ರೂ 1.50, ಆಗಸ್ಟ್‌ನಲ್ಲಿ ರೂ 1.50 ಏರಿಕೆ ಹಾಗೂ ನವೆಂಬರ್‌ನಲ್ಲಿ 3ನೇ ಬಾರಿಗೆ 1 ರೂಪಾಯಿ ಏರಿಕೆ ಮಾಡಲಾಗಿತ್ತು. ಬಳಿಕ 2020ರಲ್ಲಿ 1 ರೂಪಾಯಿ 50 ಪೈಸ್ ಏರಿಕೆ ಮಾಡಲಾಗಿತ್ತು. 2021ರ ಫೆಬ್ರವರಿಯಲ್ಲಿ ಹಾಲಿನ ದರ ರೂ.2 ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬೆಲೆ ಏರಿಕೆಗೆ ಕೆಎಂಎಫ್ ಮುಂದಾಗಿದೆ.
ENGLISH SUMMARY…
Price of milk to be increased soon: Shocker to the people of the state?
Bengaluru, January 18, 2022 (www.justkannada.in): Here is a shocker for the people of the State who are already reeling under difficulties due to the COVID-19 Pandemic, lockdown, and steep increase in prices of essential commodities. The Karnataka Milk Federation (KMF) is contemplating increasing the price of milk by Rs. 2 per liter.
The KMF authorities are said to be arriving at a final decision over the proposal of increasing the prices of milk after discussing with Chief Minister Basavaraj Bommai. It is said that the proposal to increase the prices of milk was made in the annual general body meeting of the KMF held recently. However, KMF Chairman Balachandra Jarikholi has informed that a final decision in this regard would be taken after discussing with the various Federations and Chief Minister.
The prices of milk is increasing continuously over the last three years. The prices were increased thrice from 2019. While Rs. 1.50 was increased in February 2019, it was again increased by Rs. 1.50 in August. Again the price was increased by Re. 1 in November. It was increased by Rs. 1.50 in 2020 and by Rs. 2 in February 2021. Now KMF has again proposed to increase the price.
Keywords: KMF/ milk price/ proposal to increase
Key words: Shock -milk -price –hike- soon