ಮೈಸೂರು, ನ.21,2024: (www.justkannada.in news) ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ ಹೇಳಿಕೆಯೊಂದು ಅನೇಕಾ ಊಹಾಪೋಹಗಳಿಗೆ ಎಡೆ ಮಾಡಿದೆ. ಅಷ್ಟಕ್ಕೂ ಪರಮೇಶ್ವರ್ ಹೇಳಿದ್ದಾದರು ಏನು..?
ಸಿಎಂ ತವರಲ್ಲಿ ಗೃಹ ಸಚಿವರಿಂದ ಶಾಕಿಂಗ್ ಸ್ಟೇಟ್ ಮೆಂಟ್. ಆದಷ್ಟು ಬೇಗ ಮೈಸೂರಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟುಬಿಡಿ. ಮುಂದೆ ಏನ್ ಆಗತ್ತೋ ಗೊತ್ತಿಲ್ಲ. ಇವತ್ತಿನ ರಾಜಕೀಯ ಬೆಳವಣಿಗೆ ನೋಡ್ತಿದ್ರೆ ಏನೂ ಹೇಳಲಿಕ್ಕೆ ಆಗಲ್ಲ. ಕಾಂಗ್ರೆಸ್ ಕಚೇರಿಯ ಕಾರ್ಯಕ್ರಮದಲ್ಲಿ ಡಾ. ಜಿ ಪರಮೇಶ್ವರ್ ಹೇಳಿಕೆ.
ಮೈಸೂರಿನ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಸ್ಥಳವನ್ನ ಪಡೆಯಲು ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಚಂದ್ರಪ್ರಭಾ ಅರಸು ಅವರ ಜೊತೆ ಸಾಕಷ್ಟು ಬಾರಿ ಮೀಟಿಂಗ್ ಮಾಡಿದ್ದೇನೆ. ಈಗ ಶೀಘ್ರದಲ್ಲೇ 15 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಂಗ್ರೆಸ್ ಕಚೇರಿಯನ್ನ ಕಟ್ಟಲು ಸಿಎಂ ಹೊರಟಿದ್ದಾರೆ. ಆದಷ್ಟು ಬೇಗ ಕಟ್ಟುಬಿಡಿ ಮುಂದೆ, ಏನಾಗುತ್ತೋ ಗೊತ್ತಾಗಲ್ಲ. ಇವತ್ತಿನ ರಾಜಕೀಯ ಬೆಳವಣಿಗೆ ನೋಡಿದ್ರೆ ಏನೂ ಹೇಳಲಿಕ್ಕೆ ಆಗಲ್ಲ. ಬೇಗ ನಮ್ಮ ಸರ್ಕಾರ ಇರುವಾಗಲೇ ಶಂಕುಸ್ಥಾಪನೆ ನೆರವೇರಿಸಿ.
ಸಿದ್ದರಾಮಯ್ಯ ಅವರ ಮೇಲೆ ಇನ್ನಷ್ಟು ಆಪಾದನೆ ಮಾಡಿದರೂ ಅವರ ಮೇಲೆ ಏನೂ ಮಾಡಲಿಕ್ಕೆ ಆಗಲ್ಲ. ಅವರು ಇನ್ನಷ್ಟು ಗಟ್ಟಿಯಾಗುತ್ತಿದ್ದಾರೆ ಎಂದ ಡಾ ಜಿ ಪರಮೇಶ್ವರ್.
ರಾಜಕೀಯ ಪರಿಸ್ಥಿತಿಗಳು ಹೆಂಗೆಂಗೋ, ಏನೇನು ಅಂತ ಹೇಳಲು ಆಗಲ್ಲ ನಮ್ಮ ಸರ್ಕಾರ ಇರುವಾಗಲೇ ಮುಗಿಸಿದರೆ ಚೆನ್ನಾಗಿರುತ್ತೆ. ಮೈಸೂರಿನ ಆರ್ಕಿಟೆಕ್ ಪ್ರಕಾರ ಕಚೇರಿ ಕಟ್ಟಿ. ಕಳೆದ ಬಾರಿಯ ಸಭೆಯಲ್ಲಿ ಕೋಪದಲ್ಲಿ ಮಾತನಾಡಿದ್ದೆ. ನೀವು ಯಾವ ಸೀಮೆ ಚೀಫ್ ಮಿನಿಸ್ಟರ್ ನೀವು? ನೀವು ಕಾಂಗ್ರೆಸ್ ಪಕ್ಷದ ಸಿಎಂ ಎಂದು ಹೇಳಿದ್ದೆ . ಸುಮ್ಮನೆ ಸಿಎಂ ಆದರೆ ಸರಿ ಆಗಲ್ಲ ಎಂದು ಹೇಳಿದ್ದೆ. ಎರಡನೇ ಬಾರಿ ಸಿಎಂ ಆದಾಗ ಅವರ ತಲೆ ಒಳಗೆ ಹೋಗಿದೆ ಎಂದು ಡಾ,ಪರಮೇಶ್ವರ್ ನೀಡಿದ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
key words: Home Minister’s, shocking statement, at CM’s hometown