ತುಮಕೂರು,ಸೆ,18,2020(www.justkannada.in): ಸಂವಿಧಾನ ಸಿನಿ ಕಂಬೈನ್ಸ್ ರವರ ಚೊಚ್ಚಲ ಕಾಣಿಕೆಯ ಗುಲಾಮಗಿರಿ ಚಿತ್ರದ ಚಿತ್ರೀಕರಣ ಕೊರಟಗೆರೆಯ ಗಿರಿನಗರ ಜಂಪೇನಹಳ್ಳಿ ಸುತ್ತಮುತ್ತಲಿನಲ್ಲಿ ಚಿತ್ರೀಕರಣ ಮಾಡಲಾಯಿತು.
ಇದೊಂದು ಒಳ್ಳೆಯ ಸಂದೇಶ ಚಿತ್ರವಾಗಿದ್ದು ಕನ್ನಡ ತೆಲುಗು ತಮಿಳು ಮೂರು ಭಾಷೆಯಲ್ಲಿ ತಯಾರಾಗುತ್ತಿದೆ ಇದು ಆಳುವ ವರ್ಗ ದುಡಿಯುವ ವರ್ಗದ ನಡುವೆ ನಡೆಯುವ ಸಂಘರ್ಷ ಇಂದಿಗೂ ಗುಲಾಮರಾಗಿ ಬಾಳುತ್ತಿರುವ ಸಂದೇಶವನ್ನು ಇಟ್ಟುಕೊಂಡು ತಯಾರು ಮಾಡುತ್ತಿರುವ ಚಿತ್ರ ಎಂದು ನಿರ್ದೇಶಕ ಅರುಣ್ ಕೃಷ್ಣ ಹೇಳಿದರು.
ಇದೇ ಮೊದಲ ಬಾರಿಗೆ ನಮ್ಮ ಕಲ್ಪತರು ನಾಡಿನ ಯುವಕ ನಾಯಕನಾಗಿ ಟೈಗರ್ ನಾಗ್ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಸಂದರ್ಭದಲ್ಲಿ ಮಾತನಾಡಿದ ಟೈಗರ್ ನಾಗ್ ನಮ್ಮ ಕಲ್ಪತರು ನಾಡಿನಲ್ಲಿ ಸಂಪೂರ್ಣ ಚಿತ್ರ ಮಾಡುತ್ತಿರುವುದು ನನಗೆ ಖುಷಿ ತಂದ ವಿಷಯವಾಗಿದೆ. ನಾನು ಇದೇ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸುತ್ತಿದ್ದೇನೆ. ಹಲವು ಚಿತ್ರಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡಿಕೊಂಡು ಸುಮಾರು ಹತ್ತು ವರ್ಷದಿಂದ ಚಿತ್ರರಂಗದಲ್ಲಿ ಕಳೆದಿದ್ದೇನೆ. ಈ ಚಿತ್ರ ಮೂರು ಭಾಷೆಯಲ್ಲಿ ತಯಾರಾಗುತ್ತಿದೆ. ದೊಡ್ಡಮಟ್ಟದ ಹೆಸರು ತಂದುಕೊಡುವ ಚಿತ್ರವಾಗಿದ್ದು ಸಂಪೂರ್ಣವಾಗಿ ತುಮಕೂರು ಜಿಲ್ಲೆ ಸುತ್ತಮುತ್ತಲಿನಲ್ಲಿ ನಡೆಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ಮಾಪಕರಾದ ವಾಸು ಸಹ ನಿರ್ದೇಶಕರಾದ ಮಹಾರಾಜ ಮಧುಗಿರಿ ಕ್ಯಾಮೆರಾಮನ್ ಸಿದ್ದೇಶ್ ಸಹನಟರುಗಳಾದ ಶಶಿವರ್ಣ ಕುಮಾರ್ ಫಾರೂಕ್ ರಂಗ ನಾಗಣ್ಣ ಮಂಜುನಾಥ ಇನ್ನಿತರ ಕಲಾವಿದರುಗಳು ಚಿತ್ರೀಕರಣ ಸಮಯದಲ್ಲಿ ಇದ್ದರು.
Key words: Shooting –gulamagiri- Cinema-Tumkur