ಬೆಂಗಳೂರು, ಮೇ 5, 2021(www.justkannada.in): ಕೋವಿಡ್ ಲಸಿಕೆಗಳ ಕೊರತೆ ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಷ್ಟೇ ಅಲ್ಲ, ಬದಲಿಗೆ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಗಳಿಗೂ ತಟ್ಟಿದೆ. ಈ ಕಾರಣದಿಂದಾಗಿ ಅನೇಕ ಖಾಸಗಿ ಆಸ್ಪತ್ರೆಗಳು ಲಸಿಕಾ ಅಭಿಯಾನದಿಂದ ಹೊರಗುಳಿದಿವೆ.
ಬೆಂಗಳೂರು ನಗರದಲ್ಲಿ 33 ಖಾಸಗಿ ಆಸ್ಪತ್ರೆಗಳು 21.71 ಲಕ್ಷ ಡೋಸ್‌ಗಳಿಗೆ ಬೇಡಿಕೆ ಇಟ್ಟಿದ್ದವು. ಆದರೆ ಜೂನ್ 2ರಂದಿಗೆ ಕೇವಲ ೧೫.೬೩ ಲಕ್ಷ ಡೋಸ್ ಗಳು ಮಾತ್ರ ಲಭಿಸಿವೆ. ಈ ಖಾಸಗಿ ಆಸ್ಪತ್ರೆಗಳು ೧೮,೪೧,೬೨೦ ಕೋವಿಶೀಲ್ಡ್ ಹಾಗೂ ೩,೨೯,೬೮೦ ಡೋಸ್ ಕೊವ್ಯಾಕ್ಸಿನ್ ಲಸಿಕೆಗಳಿಗೆ ಬೇಡಿಕೆ ಇಟ್ಟಿದ್ದವು.
ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳ ಸಂಘದ (ಪಿಹೆಚ್‌ಎಎನ್‌ಎ) ಪ್ರಕಾರ ಲಸಿಕೆ ತಯಾರಿಸುವ ಕಂಪನಿಗಳು ಕನಿಷ್ಠ ಬೇಡಿಕೆಯನ್ನು ನಿಗಧಿಪಡಿಸಿವೆ, ಹಾಗಾಗಿ ಸಣ್ಣ ಆಸ್ಪತ್ರೆಗಳು ಪರಿಣಾಮ ಎದುರಿಸುತ್ತಿವೆ.
ದಿನಾಂಕ ೦೪.೦೬.೨೦೨೧ರಂದು ಗುರುವಾರ ರಾಜ್ಯದ ಆರೋಗ್ಯ ಇಲಾಖಾ ಅಧಿಕಾರಿಗಳು ಹಾಗೂ 300 ಆಸ್ಪತ್ರೆಗಳ ಪ್ರತಿನಿಧಿಗಳ ನಡುವೆ ನಡೆದಂತಹ ಒಂದು ಸಭೆಯಲ್ಲಿ ಬೆಂಗಳೂರು ನಗರದಲ್ಲಿ ಕೇವಲ ೫೨ ಖಾಸಗಿ ಆಸ್ಪತ್ರೆಗಳು ಹಾಗೂ ೨೩೧ ಸರ್ಕಾರಿ ಸ್ಥಾಪನೆಗಳಲ್ಲಿ ಮಾತ್ರ ಕೋವಿಡ್ ಲಸಿಕೆ ಲಭ್ಯವಾಗುತ್ತವೆ. ಇದಕ್ಕೆ ಕಾರಣ ಮತ್ತೇನೂ ಅಲ್ಲ, ಸರಬರಾಜು ಇಲ್ಲದಿರುವುದು. ಈ ಹಿನ್ನೆಲೆಯಲ್ಲಿ ಖಾಸಗಿ ಸ್ಥಾಪನೆಗಳು ತಮ್ಮ ಪರವಾಗಿ ಲಸಿಕಾ ತಯಾರಿಕಾ ಕಂಪನಿಗಳೊಂದಿಗೆ ಮಾತನಾಡುವಂತೆ ಆರೋಗ್ಯ ಇಲಾಖೆಯ ಮೊರೆ ಹೋಗಿವೆ.
ಪಿಹೆಚ್‌ಎಎನ್‌ಎ ಕಾರ್ಯದರ್ಶಿ ಡಾ. ವೈ.ಎಲ್. ರಾಜಶೇಖರ್ ಅವರ ಪ್ರಕಾರ ಪ್ರಸ್ತುತ ಬೆಂಗಳೂರು ನಗರದಲ್ಲಿ ೫೦ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ಲಭ್ಯವಾಗುತ್ತಿವೆ. ಮೊದಲ ಎರಡು ಹಂತಗಳಲ್ಲಿ ಸುಮಾರು ೧,೦೦೦ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕಾಕರಣ ಅಭಿಯಾನದಲ್ಲಿ ಸಕ್ರಿಯವಾಗಿದ್ದವು. ಲಸಿಕಾಕರಣದ ಈ ಗತಿಯ ಪ್ರಕಾರ ಇನ್ನೆರೆಡು ಅಥವಾ ಮೂರು ವಾರಗಳಲ್ಲಿ ಈ ಎಲ್ಲಾ ೫೦ ಆಸ್ಪತ್ರೆಗಳಲ್ಲಿರುವ ಲಸಿಕಾ ದಾಸ್ತಾನು ಖಾಲಿಯಾಗುತ್ತದೆ.
“ಇತರೆ ಆಸ್ಪತ್ರೆಗಳಲ್ಲಿಯೂ ಲಸಿಕೆಗಳು ಲಭ್ಯವಾಗಿದ್ದರೆ ಇನ್ನು ಮೂರು ವಾರಗಳೊಳಗೆ ಮತ್ತಷ್ಟು ಜನರಿಗೆ ಲಸಿಕೆ ಲಭ್ಯವಾಗುತಿತ್ತು. ಆದ್ದರಿಂದ ಹೆಚ್ಚಿನ ಸಂಖ್ಯೆಯ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಗಳ ದಾಸ್ತಾನು ಹೊಂದಿರುವುದು ಮುಖ್ಯ,” ಎನ್ನುತ್ತಾರೆ ರಾಜಶೇಖರ್.
ಪಿಹೆಚ್‌ಎಎನ್‌ಎ ಅಧ್ಯಕ್ಷ ಡಾ. ಹೆಚ್.ಎಂ. ಪ್ರಸನ್ನ ಅವರ ಪ್ರಕಾರ ಲಸಕಾ ತಯಾರಿಕಾ ಕಂಪನಿಗಳು ಲಸಿಕೆ ಒದಗಿಸುವ ಕನಿಷ್ಠ ಪ್ರಮಾಣವನ್ನು ನಿಗಧಿಪಡಿಸಿತ್ತು. ಹಾಗಾಗಿ, ಖಾಸಗಿ ಆಸ್ಪತ್ರೆಗಳು ದೂರ ಉಳಿದವು. ಅವರ ಪ್ರಕಾರ ಒಂದು ಆಸ್ಪತ್ರೆ ಕನಿಷ್ಠ ೫,೦೦೦ ಡೋಸ್ ಗಳ ಬೇಡಿಕೆ ನೀಡಬೇಕು. ಅಂದರೆ ಇದರ ಬೆಲೆ ಕೋವಿಶೀಲ್ಡ್ ಒಂದು ಡೋಸ್ ಗೆ ರೂ.೬೦೦ರ ಪ್ರಕಾರ ಒಟ್ಟು ರೂ.೩೦ ಲಕ್ಷ ಅಗತ್ಯವಿರುತ್ತದೆ. ಸಣ್ಣ ಆಸ್ಪತ್ರೆಗಳ ಬಳಿ ಅಷ್ಟೊಂದು ಹಣ ಇರುವುದಿಲ್ಲ.
“ರಾಜ್ಯ ಸರ್ಕಾರವು ಪಿಹೆಚ್‌ಎಎನ್‌ಎ ಪರವಾಗಿ ಲಸಿಕೆ ತಯಾರಿಸುವ ಕಂಪನಿಗಳೊಂದಿಗೆ ಮಾತನಾಡುವ ಭರವಸೆ ನೀಡಿದ್ದು, ತಯಾರಕರು ಸರಬರಾಜನ್ನು ಖಾತ್ರಿಪಡಿಸಿದ ಕೂಡಲೇ, ಹೆಚ್‌ಡಿಎಫ್‌ಸಿ, ಎಸ್‌ಬಿಐ ಹಾಗೂ ಕೆನರಾ ಬ್ಯಾಂಕುಗಳ ಮೂಲಕ ಆಸ್ಪತ್ರೆಗಳ ಪರವಾಗಿ ಪಿಹೆಚ್‌ಎಎನ್‌ಎ ಲಸಿಕೆಗಳನ್ನು ಖರೀದಿಸುತ್ತದೆ. ನಂತರ ಆ ಲಸಿಕೆಗಳನ್ನು, ಒಂದು ಬಾರಿಗೆ ೧೦೦ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಡೋಸ್‌ಗಳನ್ನು ಖರೀದಸಲು ಸಾಧ್ಯವಾಗದಿರುವಂತಹ ಸಣ್ಣ ಆಸ್ಪತ್ರೆಗಳಿಗೆ ಸರಬರಾಜು ಖಾತ್ರಿಪಡಿಸಲು ಪಿಹೆಚ್‌ಎಎನ್‌ಎ ಸದಸ್ಯರೊಂದಿಗೆ ಬಡ್ಡಿ ದರದಲ್ಲಿ (ವಾರ್ಷಿಕ ೬% ರಿಂದ ೭%ವರೆಗೆ) ಒದಗಿಸಲಾಗುತ್ತದೆ,” ಎಂದು ವಿವರಿಸಿದರು.
ಭಾರತದ ಆರೋಗ್ಯಸೇವಾದರರ ಸಂಘವೂ ಸಹ ದೇಶದಾದ್ಯಂತ ಚಿಕ್ಕ ಆಸ್ಪತ್ರೆಗಳಿಗಾಗಿ ಲಸಿಕೆಗಳಿಗೆ ಬೇಡಿಕೆ ಇಟ್ಟಿದ್ದು, ಅವರಿಗೂ ಸಹ ಇನ್ನೂ ಲಸಿಕೆಗಳು ಸರಬರಾಜಾಗಿಲ್ಲ ಎನ್ನುತ್ತಾರೆ ಪಿಹೆಚ್‌ಎಎನ್‌ಎ ಮುಖ್ಯಸ್ಥರು.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Shortage – Covid Vaccine – Private Hospitals – Bangalore.