ಮೈಸೂರು,ಆಗಸ್ಟ್,12,2021(www.justkannada.in): ಕೋವಿಡ್ ಹಿನ್ನೆಲೆ ನಾಲ್ಕು ಶ್ರಾವಣ ಶನಿವಾರಗಳಂದು ಹಾಗೂ ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರಗಳಂದು ಮೈಸೂರಿನ ವಿವಿ ಪುರಂನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಸುತ್ತ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಮೈಸೂರು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಅವರು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಆದೇಶ ಹೊರಡಿಸಿರುವ ಅವರು ಶ್ರಾವಣ ಮಾಸದ ವಿಶೇಷ ದಿನಗಳಂದು ಮೈಸೂರು ನಗರದ `ವಿ.ವಿ.ಪುರಂನಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಇರುವುದರಿಂದ ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ದೇವಸ್ಥಾನದ ಸುತ್ತಮುತ್ತ 200 ಮೀ. ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕೋವಿಡ್ ಆತಂಕವಿರುವ ಹಿನ್ನಲೆಯಲ್ಲಿ ನಾಲ್ಕು ಶ್ರಾವಣ ಶನಿವಾರಗಳಂದು ಹಾಗೂ ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರಗಳಂದು ದೇವಸ್ಥಾದಲ್ಲಿ ಹೆಚ್ಚಿನ ಜನಸಂದಣಿ ಸೇರುವ ಸಾಧ್ಯತೆ ಇರುವುದರಿಂದ ಮೊದಲನೇ ಶ್ರಾವಣ ಮಾಸದ ದಿನಾಂಕ: 13.08.201, 14.08.2021 ಮತ್ತು 15.08.2021 ರಂದು 2ನೇ ಶ್ರಾವಣ ವಾಸರ ದಿನಾಂಕ: 20.08.2021 21.08.2021 22.08.2021 ರ೦ದು ಮೂರನೇ ಶ್ರಾವಣ ಮಾಸದ ದಿನಾಂಕ:27.08.2021, 28.08.2021 ಮತ್ತು 29.08.2021 ರಂದು ಹಾಗೂ 4 ನೇ ಶ್ರಾವಣ ಮಾಸದ ದಿನಾಂಕ: 03.09.2021. 04.09.2021, ದಿನಾಂಕ: 05.09.2021 ರಂದು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮಾತ್ರ ಪೂಜೆ ಕಾರ್ಯಕ್ರಮ ನಡೆಸಲು ಅನುಮತಿಸಿ, ಸಾರ್ವಜನಿಕರಿಗೆ ಮತ್ತು ಭಕ್ತಾಧಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Key words: Shravan Masaa –mysore-Venkateswara Swamy temple –restriction-devotees