ಬೆಂಗಳೂರು, ಏಪ್ರಿಲ್ 12, 2021 (www.justkannada.in): ಗಾಯಕಿ ಶ್ರೇಯಾ ಘೋಷಾಲ್ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
ತುಂಬು ಗರ್ಭಿಣಿ ಆಗಿರುವ ಶ್ರೇಯಾಗೆ ಸ್ನೇಹಿತರೆಲ್ಲ ಸೇರಿ ವರ್ಚುವಲ್ ಬೇಬಿ ಶವರ್ ಕಾರ್ಯಕ್ರಮ ಮಾಡಿದ್ದಾರೆ. ಕಾರ್ಯಕ್ರಮದ ಕೆಲ ಫೋಟೋಗಳನ್ನು ಶ್ರೇಯಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಶ್ರೇಯಾ ಘೋಷಾಲ್ ಅವರ ಬೇಬಿ ಶವರ್ ಕಾರ್ಯಕ್ರಮದಲ್ಲೂ ಅವರ ಸ್ನೇಹಿತರು ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿದ್ದಾರೆ.
ಬಗೆಬಗೆಯ ಅಡುಗೆಗಳನ್ನು ಮಾಡಿ ಶ್ರೇಯಾಗೆ ಕಳಿಸಲಾಗಿದೆ. ಆನ್ಲೈನ್ ಮೂಲಕ ವರ್ಚುವಲ್ ಆಗಿಯೇ ಬೇಬಿ ಶವರ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.
ಈ ವಿಷಯವನ್ನು ಶ್ರೇಯಾ ಘೋಷಾಲ್ ಈ ವಿಚಾರವನ್ನು ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.