ಬೆಂಗಳೂರು,ಮಾರ್ಚ್,25,2025 (www.justkannada.in): ವಿಪಕ್ಷನಾಯಕರ ಫೋನ್ ಅಷ್ಟೆ ಅಲ್ಲ, ಆಡಳಿತ ಪಕ್ಷದವರ ಫೋನ್ ಕೂಡ ಟ್ಯಾಪಿಂಗ್ ಆಗುತ್ತಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಆರೋಪಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಕೇವಲ ವಿಪಕ್ಷ ನಾಯಕರ ಫೋನ್ ಅಷ್ಟೆ ಕದ್ದಾಲಿಕೆ ಮಾಡುತ್ತಿಲ್ಲ. ಆಡಳಿತ ಪಕ್ಷದವರ ಫೋನ್ ಕೂಡ ಕದ್ದಾಲಿಕೆ ಆಗುತ್ತಿದೆ. ಕುರ್ಚಿ ಉಳಿಸಿಕೊಳ್ಳಲು ಫೋನ್ ಟ್ಯಾಪಿಂಗ್ ನಡೆಯುತ್ತಿದೆ ಎಂದು ಕಿಡಿಕಾರಿದರು.
ಸಿಟಿ ಫ್ಯಾಕ್ಟರಿ ಕುರಿತು ಸಮಗ್ರ ತನಿಖೆಯಾಗಕು. ಹನಿಟ್ರ್ಯಾಪ್ ಕೇಸ್ ಸಿಬಿಐ ತನಿಖೆ ಆಗಬೇಕು. ಹನಿಟ್ರ್ಯಾಪ್ ಮಾಡಿದ ಆರೋಪಿಗಳನ್ನ ಪತ್ತೆ ಹಚ್ಚಲಿ ಎಂದು ಶ್ರೀರಾಮುಲು ಆಗ್ರಹಿಸಿದರು.
Key words: Phone tapping, Former Minister, Sriramulu