ಬೆಂಗಳೂರು, ಜನವರಿ 19, 2021 (www.justkannada.in): ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಕೊನೆಯ ದಿನದಾಟದಲ್ಲಿ ಆರಂಭಿಕ ಬ್ಯಾಟ್ಸ್ಮನ್ ಶುಭಮನ್ ಗಿಲ್ (91) ಶತಕದಿಂದ ವಂಚಿತರಾಗಿದ್ದಾರೆ.
ಶುಭಮನ್ ಗಿಲ್ ಅವರು 146 ಎಸೆತಗಳಲ್ಲಿ 91 ರನ್ ಗಳಿಸಿದ ವೇಳೆ ನಥನ್ ಲಯೋನ್ ಬೌಲಿಂಗ್ನಲ್ಲಿ ಸ್ಮಿತ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
ಶುಭಮನ್ ಗಿಲ್ ಅಮೋಘ ಆಟದಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ಗಳಿದ್ದವು ಸಹಿತ 91 ರನ್ಗಳನ್ನು ಕಲೆಹಾಕಿದ್ದಾರೆ.
ಸದ್ಯ 241 ರನ್ ಗಳಿಸಿರುವ ಟೀಂ ಇಂಡಿಯಾ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಗೆಲುವಿಗೆ 87ರನ್ ಗಳಿಸಬೇಕಿದೆ. 39ರನ್ ಗಳಿಸಿರುವ ಪಂತ್, ಮಯಾಂಕ್ ಅಗರ್ ವಾಲ್ ಕ್ರೀಸ್’ನಲ್ಲಿದ್ದಾರೆ.