ಎಸೆನ್ಸ್ ಸೇವಿಸಿ ಕೈದಿಗಳ ಸಾವು: ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಶ್ಯಾಮ ಭಟ್ ಸೂಚನೆ

ಮೈಸೂರು,ಜನವರಿ,20,2025 (www.justkannada.in): ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಎಸೆನ್ಸ್ ಸೇವನೆಯಿಂದ ಮೂವರು ಕೈದಿಗಳು ಮೃತಪಟ್ಟ ಪ್ರಕರಣ ಸಂಬಂಧ ಮಾಹಿತಿ ಪಡೆದಿದ್ದೇನೆ. ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಜೈಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಮ ಭಟ್ ತಿಳಿಸಿದರು.

ಇಂದು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದ ಕರ್ನಾಟಕ ಮಾನವ ಹಕ್ಕು ಆಯೋಗದ ಅಧ್ಯಕ್ಷ ಶ್ಯಾಮ ಭಟ್ ಅವರನ್ನು ಕೆ ಆರ್ ಆಸ್ಪತ್ರೆ ವೈದ್ಯಾಧಿಕಾರಿಗಳ ಭೇಟಿಯಾಗಿದ್ದು ಈ ವೇಳೆ ವೈದ್ಯರಿಂದ ಮಾಹಿತಿ ಪಡೆದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಇತ್ತೀಚಿಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಎಸೆನ್ಸ್ ಸೇವನೆ ಮಾಡಿ ಮೂವರು ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಭೇಟಿ ನೀಡಿ ಅಧಿಕಾರಿಗಳ ಬಳಿ ಮಾಹಿತಿ ಪಡಿದಿದ್ದೇನೆ. ಕ್ರಿಸ್ಮಸ್ ಪ್ರಯುಕ್ತ ಜೈಲಿನಲ್ಲಿ ಕೇಕ್ ತಯಾರಿಸಲು ಕೇವಲ 60 ಎಂಎಲ್ ಎಸೆನ್ಸ್ ಅನ್ನ ಕೊಡಲಾಗಿತ್ತು. ಡಿ.28 ರಂದು ಹೊಟ್ಟೆ ನೋವು ಎಂದು ಮೂವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಾದೇಶ್, ನಾಗರಾಜು ಮತ್ತು ರಮೇಶ ಎಂಬ ಕೈದಿಗಳು ಚಿಕಿತ್ಸೆ ಫಲಕಾರಿಯಾಗದೆ  ಸಾವನ್ನಪ್ಪಿದ್ದರು. ಮಾದೇಶ ಎಂಬಾತ ಎಸೆನ್ಸ್ ತಿಂದಿರಿವ ಬಗ್ಗೆ ವೈದ್ಯರ ಬಳಿ ಹೇಳಿಕೊಂಡ ಬಳಿಕ ಮೇಲ್ನೋಟಕ್ಕೆ ಎಸೆನ್ಸ್ ತಿಂದ ಕಾರಣದಿಂದ ಸಾವು ಸಂಭವಿಸಿದೆ ಎಂದು ವೈದ್ಯರೂ ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಇನ್ನು ಎರಡು ವಾರದದೊಳಗೆ ವರದಿ ಬರಲಿದೆ. ಆಗ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಶ್ಯಾಮ್ ಭಟ್ ತಿಳಿಸಿದರು.

ಎಸೆನ್ಸ್ ಒಬ್ಬ ವ್ಯಕ್ತಿ 4 ರಿಂದ 5 ಎಂಎಲ್ ಸೇವನೆ ಮಾಡಿದ್ರೆ ಸಾವಾಗುವ ಸಂಭವ ಇರುತ್ತದೆ. ಹಾಗಾಗಿ ಈ ಮೂವರು ಎಸೆನ್ಸ್ ಸೇವನೆ ಮಾಡಿಯೇ ಸಾವನ್ನಪ್ಪಿದ್ದಾರೆ . ಅವರು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ತೆಗೆದುಕೊಂಡಿಲ್ಲ. ಅದರಲ್ಲಿ ಏನೋ ನಶೆ ಬರುತ್ತೆ ಎಂದು ತೆಗೆದುಕೊಂಡಿರಬಹುದು. ಮುಂದೆ ಈ ರೀತಿ ಘಟನೆ ಸಂಭವಿಸದಂತೆ ಎಚ್ಚರಿಕೆ ವಹಿಸಲು ಜೈಲು ಅಧಿಕಾರಿಳಿಗೆ ಸೂಚನೆ ನೀಡಿದ್ದೇವೆ ಎಂದರು.

Key words: Death,  prisoners, Mysore Central jail, Shyama Bhatt