ಮದುವೆಗೂ ಮುಂಚೆ ಜಾತಕ ಹೊಂದಾಣಿಕೆಗಿಂತ ʼ ಸಿಕಲ್ ಸೆಲ್ ಕಾರ್ಡ್‌ ʼ  ಹೊಂದಾಣಿಕೆಯೇ ಮುಖ್ಯ..!

'Sickle cell card' compatibility is more important than horoscope matching before marriage.

 

All tribals in the Karnataka State below 40 years will be given identity cards on their sickle cell anemia status. The colour-coded cards can be matched ahead of a marriage in order to assess the risk of sickle cell disease in a child born from the union.

ಮೈಸೂರು, ಜೂ.19,2024: (www.justkannada.in news) ರೋಗ ನಿಯಂತ್ರಣಕ್ಕಿಂತ ರೋಗ ತಡೆಗಟ್ಟುವಿಕೆಯೇ ಮುಖ್ಯವಾದದ್ದು ಎಂಬುದನ್ನು ಮನಗಂಡಿರುವ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ, ಈ ನಿಟ್ಟಿನಲ್ಲಿ ಸಿಕಲ್‌ ಸೆಲ್‌ ಅನೀಮಿಯಾ ತಡೆಗೆ  ʼ ಸಿಕಲ್‌ ಸೆಲ್‌ ಅನೀಮಿಯಾ ಕಾರ್ಡ್‌ ʼ (Sickle-cell anemia cards) ವಿತರಣೆಗೆ ಮುಂದಾಗಿದೆ.

ಇದರಿಂದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ. ಈ ಕಾರ್ಡ್ ಮಾರ್ಗದರ್ಶಕವಾಗಿ, ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಉಚಿತ ಚಿಕಿತ್ಸಾ ಸೇವೆಗಳು, ಔಷಧ ಪೂರೈಕೆ, ನಿಯಮಿತ ತಪಾಸಣೆಗಳು ಮತ್ತು ಸಮುದಾಯಮಟ್ಟದಲ್ಲಿ ಶಿಕ್ಷಣ ಕಾರ್ಯಗಳು ನೀಡಲಾಗುತ್ತದೆ. ಈ ಬಗ್ಗೆ ಆರೋಗ್ಯ ಮತ್ತು ಕುಂಟುoಬ ಕಲ್ಯಾಣ ಸೇವೆಗಳ ಅಭಿಯಾನದ ನಿರ್ದೇಶಕ ಡಾ. ನವೀನ್ ಭಟ್  ʼ ಜಸ್ಟ್‌ ಕನ್ನಡ ʼ ಜತೆ ಮಾತನಾಡಿದರು.

ಸಿಕ್ಕಿಲ್ ಸೆಲ್ ಅನೀಮಿಯಾದವರು ತಕ್ಷಣ ಚಿಕಿತ್ಸೆ ಪಡೆಯಲು ಈ ಕಾರ್ಡ್ ಸಹಾಯ ಮಾಡುತ್ತದೆ. ಈ ಕಾರ್ಡ್ ಮೂಲಕ ರೋಗಿಗಳ ವಿವರಗಳನ್ನು ಸರಕಾರ ಇತ್ಯರ್ಥವಾಗಿ ಶ್ರೇಣೀಕರಿಸಲು ಸಾಧ್ಯ, ಇದು ಉತ್ತಮ ಯೋಜನೆ ಮತ್ತು ಕಾರ್ಯೋನ್ಮುಖತೆಗೆ ಸಹಕಾರಿಯಾಗುತ್ತದೆ.

ಸಮುದಾಯ ಜಾಗೃತಿ:

ಸಾಮಾನ್ಯ ಜನರಲ್ಲಿ ಸಿಕ್ಕಿಲ್ ಸೆಲ್ ಅನೀಮಿಯಾ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಹಾಯಕ.  ಈ ರೋಗ ಲಕ್ಷಣಗಳು ಸಾಮಾನ್ಯವಾಗಿ ಬುಡಕಟ್ಟು ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ರಾಜ್ಯದಲ್ಲಿನ ಬುಡಗಟ್ಟು ಜನಾಂಗದವರಿಗೆ ಈ ಕಾರ್ಡ್‌ ಗಳನ್ನು ವಿತರಿಸಲಾಗುತ್ತಿದೆ. ಈ ತನಕ ಒಂದು ಸಾವಿರಕ್ಕೂ ಅಧಿಕ ಕಾರ್ಡ್‌ ಗಳನ್ನು ವಿತರಿಸಲಾಗಿದೆ.

ಬುಡಕಟ್ಟು ಜನಾಂಗದ ಬಹುತೇಕರು  ಅವಿದ್ಯಾವಂತರು.  ರಕ್ತ ಸಂಬಂಧದಲ್ಲೇ ಮದುವೆಗಳು ಹೆಚ್ಚಾಗಿ ನಡೆಯುವ ಕಾರಣ, ಈ ರೋಗ ಲಕ್ಷಣ ವಂಶಪರಾಂಪರ್ಯವಾಗಿ ಹರಡುತ್ತಲೇ ಇದೆ. ಆದ್ದರಿಂದ ಸಿಕಲ್‌ ಸೆಲ್‌ ಕಾರ್ಡ್‌ ಗಳನ್ನು ನೀಡುವ ಮೂಲಕ ಮದುವೆ ಸಂದರ್ಭದಲ್ಲಿ  ಅವರೇ ಖುದ್ದು ಪರಿಶೀಲಿಸಿಕೊಳ್ಳಬಹುದು. ಮದುವೆಯಾಗುವ ಹುಡುಗ ಹಾಗೂ ಹುಡುಗಿಯ ಕಾರ್ಡ್‌ ಗಳನ್ನು ಒವರ್‌ ಲ್ಯಾಪ್‌ ಮಾಡುವ ಮೂಲಕ “ ಕಲರ್‌ ಕೋಡಿಂಗ್‌ “ ನ ಫಲಿತಾಂಶದ ಮೇಲೆ ಮದುವೆಯಾದ್ರೆ ಸಿಕಿಲ್‌ ಸೆಲ್‌ ಅನಿಮೀಯಾ ಬರುವ ಸಾಧ್ಯತೆಯ ಪ್ರಮಾಣ ಎಷ್ಟು ಎಂಬುದನ್ನು ತಿಳಿದುಕೊಂಡು ಆನಂತರ ಮದುವೆ ಮಾಡಬೇಕೆ..? ಅಥವಾ ಬೇಡವೇ..? ಎಂಬುದನ್ನು ನಿರ್ಧರಿಸಬಹುದು .

ಸರಕಾರಿ ಯೋಜನೆಗಳ ಲಾಭಗಳನ್ನು ಪಡಿಸಿಕೊಳ್ಳಲು ಈ ಕಾರ್ಡ್ ಅತೀ ಮುಖ್ಯವಾಗುತ್ತದೆ. ಇದರ ಮೂಲಕ ಸಿಕ್ಕಿಲ್ ಸೆಲ್ ಅನೀಮಿಯಾ ಪೀಡಿತರ ಆರೋಗ್ಯದ ಸ್ಥಿತಿ ಸುಧಾರಿಸುತ್ತಿದ್ದು, ಉತ್ತಮ ಗುಣಮಟ್ಟದ ಬದುಕಿಗೆ ಸಹಾಯವಾಗುತ್ತದೆ.

ಲಾಸ್ಟ್‌ ಪಂಚ್‌ ಲೈನ್‌ :

ಇದೊಂದು ಅನುವಂಶಿಕ ಕಾಯಿಲೆ. ಈ ರೋಗವು ಆದಿವಾಸಿಗಳಲ್ಲಿ ಸಾಮಾನ್ಯವಾಗಿದೆ. ದೇಶದಲ್ಲಿ ಸುಮಾರು 200 ಜಿಲ್ಲೆಗಳಲ್ಲಿ ರೋಗ ಹರಡಿದೆ  ಹೆಚ್ಚಾಗಿ ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಕಂಡು ಬಂದಿದೆ.

“2047 ರ ವೇಳೆಗೆ ಈ ರೋಗವನ್ನು ತೊಡೆದುಹಾಕುವ ಗುರಿ ಹೊಂದಲಾಗಿದೆ. ಇದು ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬಂದಿದೆ. ವಂಶಪರಾಂಪರ್ಯವಾಗಿ  ಹರಡುವುದರಿಂದ, ನಿರಂತರ ತಪಾಸಣೆ ಪ್ರಯತ್ನದ ಮೂಲಕ ತಡೆಗಟ್ಟುವಿಕೆ ಸಾಧ್ಯವಾಗುತ್ತದೆ.

40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಬುಡಕಟ್ಟು ಜನಾಂಗದವರಿಗೆ ಕಲರ್‌ -ಕೋಡೆಡ್ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಮದುವೆ ಮಾತುಕತೆ ವೇಳೆ ಎರಡು ಕಾರ್ಡ್‌ಗಳನ್ನು ಹೊಂದಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು.

key words: ‘Sickle cell card’ compatibility, is more important, than horoscope matching, before marriage.

 

SUMMARY:

All tribals in the Karnataka State below 40 years will be given identity cards on their sickle cell anemia status. The colour-coded cards can be matched ahead of a marriage in order to assess the risk of sickle cell disease in a child born from the union.

Sickle cell anaemia is an inherited disease where a person has misshapen haemoglobin that has less ability to carry oxygen. The disease is common among tribals.

“The target is to eliminate the disease by 2047. It is a disease that happens only in tribal areas and since it is genetically transmitted, the screening effort will be on prevention. We will give colour-coded identity cards to all tribals aged less than 40 years. When marriage negotiations happen, the two cards can be matched.