ಶಿವಮೊಗ್ಗ,ಮೇ,11,2019(www.justkannada.in): ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ತಮ್ಮ ಚೇಲಾಗಳನ್ನ ಬಿಟ್ಟು ಹೇಳಿಕೆ ನೀಡಿಸುತ್ತಿದ್ದಾರೆ. ಅವರನ್ನ ಕೆಪಿಸಿಸಿ ಅಧ್ಯಕ್ಷರು ಸಸ್ಪೆಂಡ್ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
ಈ ಬಗ್ಗೆ ಇಂದು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಸಿದ್ದರಾಮಯ್ಯ ಮತ್ತೆ ಸಿಎಂ ಖುರ್ಚಿಗೆ ಟವಲ್ ಹಾಕುತ್ತಿದ್ದು, ನಾವೇನೂ ಕಮ್ಮಿ ಅಂತಾ ಡಿ.ಕೆ.ಶಿವಕುಮಾರ್, ಪರಮೇಶ್ವರ್, ಎಂ.ಬಿ.ಪಾಟೀಲ್ ಸಹ ಟವಲ್ ಹಾಕುತ್ತಿದ್ದಾರೆ . ಅಲ್ಲದೆ ಸಿದ್ದರಾಮಯ್ಯ ಚೇಲಾಗಳನ್ನ ಬಿಟ್ಟು ಮತ್ತೆ ಸಿಎಂ ಆಗಲಿ ಎಂದು ಎಲ್ಲಾ ಕಡೆ ಹೇಳಿಕೆ ಕೊಡಿಸುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಅವರ ಚೇಲಾಗಳನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕಾಂಗ್ರೆಸ್ನಲ್ಲಿ ಸ್ವಲ್ಪ ಶಿಸ್ತು ಉಳಿದಿದೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.
ಐದು ವರ್ಷ ಸರ್ಕಾರ ಇರಬೇಕು ಎಂಬುವುದು ನನ್ನ ಆಶಯ. ಆದರೆ ಸಮ್ಮಿಶ್ರ ಸರ್ಕಾರವನ್ನು ಅತಂತ್ರ ಮಾಡುವ ಯತ್ನವನ್ನು ಕಾಂಗ್ರೆಸ್‌ನವರೇ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಎರಡು ಗುಂಪುಗಳು ನೇರವಾಗಿ ಹೊಡೆದಾಟ ಮಾಡಿ ಕೊಳ್ಳುತ್ತಿವೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬಂದರೂ ಬರಬಹುದು. ಕಾಂಗ್ರೆಸ್ ಎಲ್ಲಾ ಬೆಳವಣಿಗೆ ನೋಡಿದರೇ ಹಾಗೆ ಅನಿಸುತ್ತೆ ಎಂದು ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಸಿದ್ದರಾಮಯ್ಯ ಈ ಜನ್ಮದಲ್ಲಿ ಮತ್ತೆ ಸಿಎಂ ಆಗಲ್ಲ. ಅಪರೇಷನ್ ಜನಕ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಅಪರೇಷನ್ ಗೆ ಒಳಗಾಗಿದ್ದರು ಎಂದು ಲೇವಡಿ ಮಾಡಿದರು.
Key words: Siddaramaiah – again –CM-KPCC president- Dinesh Gundoorao -challenge -KS Eshwarappa.