ಮೈಸೂರು,ಜೂನ್,28,2021(www.justkannada.in): ರಾಜ್ಯ ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಫೈಟ್ ನಡೆಯುತ್ತಿದ್ದು ಈ ಮಧ್ಯೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರೋಧಿಗಳಿಗೆ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಟಾಂಗ್ ನೀಡಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ, ಸಿದ್ಧರಾಮಯ್ಯ ಆನೆ ಇದ್ದಂತೆ. ಆನೆ ಹೋಗ್ತಿದ್ರೆ ನಾಯಿ ಬೊಗಳುತ್ತವೆ. ಸಿದ್ಧರಾಮಯ್ಯ ಆಲದ ಮರ ಇದ್ದಂತೆ ಎಂದು ಸಿದ್ಧರಾಮಯ್ಯರನ್ನ ಹೊಗಳಿ ವಿರೋಧಿಗಳಿಗೆ ತಿರುಗೇಟು ನೀಡಿದರು.

ನಿನ್ನೆ ಸಿದ್ಧರಾಮಯ್ಯ ನಮ್ಮ ಮನೆಗೆ ಊಟಕ್ಕೆ ಬಂದಿದ್ದು ನಿಜ. ಆದರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಸಿದ್ದು ಆಲದ ಮರವಿದ್ದಂತೆ. ಆನೆ ಇದ್ದಂತೆ. ಸಿದ್ಧರಾಮಯ್ಯ ಯಾರನ್ನೂ ಹೇಳಿ ಕೇಳಿ ಸಿಎಂ ಆಗಬೇಕಿಲ್ಲ ಎಂದು ಹೆಚ್.ಸಿ ಮಹದೇವಪ್ಪ ಹೇಳಿದರು.
Key words: Siddaramaiah -elephant –stands-dog-former minister-HC Mahadevappa