ಬೆಂಗಳೂರು,ಆಗಸ್ಟ್,25,2022(www.justkannada.in): ಭ್ರಷ್ಟಾಚಾರ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 224 ಶಾಸಕರು ಇದ್ದಾರೆಂದಯ ಹೇಳಿದ್ದಾರೆ. ಕೆಂಪಣ್ಣ ಆರೋಪದಲ್ಲಿ ಸಿದ್ಧರಾಮಯ್ಯ ಅವರೂ ಸೇರಿದ್ದಾರೆ. ದಾಖಲೆ ನೀಡಿದರೇ ತನಿಖೆ ನಡೆಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಕೆಂಪಣ್ಣ ತಮ್ಮ ಆರೋಪಕ್ಕೆ ದಾಖಲೆ ಇದ್ರೆ ಕೊಡಲಿ, ಯಾವ ಸಚಿವರು ಹೆದರಿಸಿದ್ದಾರೆ ಅಂಥ ಸಚಿವರ ಬಗ್ಗೆ ಮಾಹಿತಿ ಕೊಡಲಿ,. ಗಾಳಿಯಲ್ಲಿ ಗುಂಡು ಹೊಡೆದರೆ ಏನು ಪ್ರಯೋಜನ..? ಎಂದು ಪ್ರಶ್ನಿಸಿದರು.
ಕೆಂಪಯ್ಯ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರು ಹೇಳಿರುವ ಪ್ರಕಾರ ಎಲ್ಲಾ ಶಾಸಕರೂ ಸೇರಿದ್ದಾರೆ. ಎಲ್ಲಾ ಶಾಸಕರೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಅಂದಿದ್ದಾರೆ. ಕೆಂಪಣ್ಣ ಆರೋಪದಲ್ಲಿ ಸಿದ್ದರಾಮಯ್ಯರೂ ಸೇರಿದ್ದಾರೆ.. ಕೆಂಪಣ್ಣ ಸಿದ್ಧರಾಮಯ್ಯರನ್ನ ಭೇಟಿಯಾಗಿ ಹೇಳುತ್ತಾರೆ. ಅವರು ದಾಖಲೆ ನೀಡಿದರೆ ನಾವು ತನಿಖೆ ಮಾಡಿಸುತ್ತೇವೆ. ತನಿಖೆ ಮಾಡಿಸುವುದಕ್ಕೆ ನಾವು ಹಿಂದೇಟು ಹಾಕುತ್ತಿಲ್ಲ ಎಂದರು.
ಗಣೇಶೋತ್ಸವ ಸಂಬಂಧ ನನಗೆ ಅರ್ಜಿ ಬಂದಿಲ್ಲ. ಅಧಿಕಾರಿಗಳಿಗೆ ಅರ್ಜಿ ಬಂದಿದೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತೇವೆ. ಈದ್ಗಾ ಮೈದಾನದಲ್ಲಿ 75 ವರ್ಷ ಹಬ್ಬ ಆಚರಣೆ ಮಾಡಿಲ್ಲ. ಸಿಟಿ ರವಿ ಪತ್ರ ಬರೆದಿದ್ದು ನನಗೆ ಗೊತ್ತಿಲ್ಲ ಎಂದರು.
Key words: Siddaramaiah – included – Kempanna-allegation-Minister- R. Ashok.