ಸಿಎಂ ಸಿದ್ದರಾಮಯ್ಯ ಜೈಲಿಗೆ : ಮೈಸೂರಲ್ಲಿ ಬಿಜೆಪಿ ಶಾಸಕ ಹೇಳಿಕೆ..?

BJP MLA Srivatsa has predicted that the state will be governed from jail on the lines of Delhi Chief Minister Arvind Kejriwal.

 

BJP MLA Srivatsa has predicted that the state will be governed from jail on the lines of Delhi Chief Minister Arvind Kejriwal.

ಮೈಸೂರು, ಆ.12,2024: (www.justkannada.in news)  ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾದರಿಯಲ್ಲೇ ರಾಜ್ಯದಲ್ಲೂ ಜೈಲಿನಿಂದಲೇ ಆಡಳಿತ ನಡೆಸುವ ಸ್ಥಿತಿ ಬರಲಿದೆ ಎಂದು ಭವಿಷ್ಯ ನುಡಿದ ಬಿಜೆಪಿ ಶಾಸಕ ಶ್ರೀವತ್ಸ.

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರಿನಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ನೇತೃತ್ವದಲ್ಲಿ  ನಗರ ಬಸ್ ನಿಲ್ದಾಣ ಬಳಿ ಪ್ರತಿಭಟನೆ. ಬಾಂಗ್ಲಾದೇಶದಲ್ಲಿನ ಹಿಂದೂಗಳ ಜೊತೆ ನಾವಿದ್ದೇವೆ ಎಂಬ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ.  ಈ ವೇಳೆ ಮಾಧ್ಯಮದ ಜತೆ ಮಾತನಾಡಿದ ಶಾಸಕ ಶ್ರೀವತ್ಸ ಹೇಳಿದಿಷ್ಟು.

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು. ಜತೆಗೆ ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಮುಖ್ಯಮಂತ್ರಿಗೆ ಸೂಚನೆ ನೀಡಬೇಕಿತ್ತು. ಆದರೆ ಬಿಜೆಪಿ ತಪ್ಪು ಮಾಡಿದೆ ಅಂತಾ ನೆಪ ಹೇಳುತ್ತಿದ್ದಾರೆ.

ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಜೈಲಿನಿಂದ ಆಧಿಕಾರ ಮಾಡುತ್ತಿದ್ದಾರೆ. ನಮ್ಮದೇನು ಅನ್ನೋ ರೀತಿ ಕರ್ನಾಟಕದ ಕಾಂಗ್ರೆಸ್‌ ಸರಕಾರವಿದೆ. ಈ ಬಗ್ಗೆ ನಾವು ರಾಷ್ಡ್ರಪತಿಗಳಿಗೆ ದೂರು ನೀಡುತ್ತೇವೆ. ಸಾವಿರಾರು ಕೋಟಿ ರೂ. ಹಗರಣವಾಗಿರುವುದರಿಂದ ಇ.ಡಿ ಮೂಲಕ ತನಿಖೆಗೆ ಒತ್ತಾಯಿಸುತ್ತೇವೆ. ನ್ಯಾಯ ದೊರಕುವ ತನಕ ಈ ನಮ್ಮ ಹೋರಾಟ ಮುಂದುವರಿಯಲಿದೆ.

ಬಿಜೆಪಿಯಲ್ಲಿ ಪರ್ಯಾಯ:

ಬಿಜೆಪಿಯ ಕೆಲ ಮುಖಂಡರು ಬಳ್ಳಾರಿಗೆ ಪರ್ಯಾಯ ಪಾದಯಾತ್ರೆ ನಡೆಸುವ ಬಗ್ಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಶ್ರೀವತ್ಸ ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಸಭೆ ಸೇರಿರುವ ಬಗ್ಗೆ ನನಗೂ ಮಾಹಿತಿ ಬಂದಿದೆ. ಪಕ್ಷದ ಮಾಜಿ ಸಂಸದರು ಹಾಗೂ ಕೆಲ ಮಾಜಿ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ಸಭೆ ಸೇರಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ.

ಪರ್ಯಾಯ ಸಭೆ ಚರ್ಚೆ ಕೇಳಿ ಕಾರ್ಯಕರ್ತನಾಗಿ ನನಗೆ ಮುಜುಗರ ಆಗುತ್ತದೆ. ಅವರೆಲ್ಲಾ ಹಿರಿಯರಿದ್ದಾರೆ ಈ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ.

ಅಧಿಕಾರ ಮೊಟಕಿಗೆ ವಿರೋಧ:

ಚಾಮುಂಡಿ ಬೆಟ್ಟದ ಪ್ರಾಧಿಕಾರ ರಚನೆ ರಾಜಮನೆತನದ ಅಧಿಕಾರ ಮೊಟಕು ವಿಚಾರ. ರಾಜ ಮನೆತನದ ಅಧಿಕಾರ ಮೊಟಕುಗೊಳಿಸಲು ಜನರ ವಿರೋಧವಿದೆ. ಇದಕ್ಕೆ ನನ್ನದು ವಿರೋಧವಿದೆ. ಮೈಸೂರಿನಲ್ಲಿ ಶಾಸಕ ಶ್ರೀವತ್ಸ ಹೇಳಿಕೆ.

ಈ ಬಗ್ಗೆ ಇಂದಿನ ಹೈ ಪವರ್ ಕಮಿಟಿಯಲ್ಲಿ ಸಿಎಂ ಜೊತೆ ಮಾತನಾಡುತ್ತೇನೆ. ಚಾಮುಂಡಿ ಬೆಟ್ಟದ ಪ್ರಾಧಿಕಾರದಲ್ಲೇ ದಸರಾ ಪ್ರಾಧಿಕಾರ ಮಾಡಲು ಮನವಿ ಮಾಡಿದ್ದೆವು. ಈ ಎಲ್ಲದರ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದರು.

key words: CM, Siddaramaiah, jailed, BJP MLA, Mysuru

SUMMARY:

BJP MLA Srivatsa has predicted that the state will be governed from jail on the lines of Delhi Chief Minister Arvind Kejriwal.