ಕೊಡಗು,ಆಗಸ್ಟ್,23,2022(www.justkannada.in): ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಖಂಡಿಸಿ ಆಗಸ್ಟ್ 26 ರಂದು ಕಾಂಗ್ರೆಸ್ ಮಡಿಕೇರಿ ಚಲೋಗೆ ಕರೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಜನಜಾಗೃತಿ ಸಮಾವೇಶ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಆಗಸ್ಟ್ 24 ರಿಂದ 27 ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ನಿಷೇದಾಜ್ಞೆ ಜಾರಿ ಹಿನ್ನೆಲೆಯಲ್ಲಿ ಈ ಕುರಿತು ಮಾತನಾಡಿರುವ ಶಾಸಕ ಕೆ.ಜಿ ಬೋಪಯ್ಯ, ನಿಷೇಧಾಜ್ಞೆಯನ್ನ ಎಲ್ಲರೂ ಪಾಲಿಸಬೇಕಾಗುತ್ತೆ. ನಾವು ಸರ್ಕಾರದ ಭಾಗವಾಗಿರುವುದರಿಂದ ಇದಕ್ಕೆ ಮನ್ನಣೆ ನೀಡುತ್ತೇವೆ. ಆದರೆ ನಮ್ಮ ಜನಜಾಗೃತಿ ಕೆಲಸ ಮುಂದುರೆಯಲಿದೆ. ನಾವು 5 ತಂಡಗಳಾಗಿ ಜಿಲ್ಲೆಯ ಉದ್ಧಗಲಕ್ಕೂ ಸಂಚರಿಸುತ್ತೇವೆ. ಕರ ಪತ್ರ ಹಂಚಿ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ.
ನಮ್ಮದು ಸಿದ್ದರಾಮಯ್ಯರ ರೀತಿ ಏಕಚಕ್ರಾದಿಪತ್ಯವಲ್ಲ. ನಮಗೆ ಪಕ್ಷದಲ್ಲಿ ಹಿರಿಯರಿದ್ದಾರೆ. ಮುಂದಿನ ನಡೆ ಬಗ್ಗೆ ನಾವು ನಾಯಕರ ಜತೆ ಚರ್ಚೆ ಮಾಡುತ್ತೇವೆ . ಎಂದರು.
Key words: Siddaramaiah-like -monocracy:—ruler-MLA- KG Bopaiah.