ಬೆಂಗಳೂರು,ನ,29,2019(www.justkannada.in): ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯಗೆ ಕಂಟಕ ಎದುರಾಗಲಿದೆ. ಪ್ರತಿಪಕ್ಷ ನಾಯಕ ಸ್ಥಾನದಿಂದಲೇ ಅವರನ್ನ ಕೆಳಗಿಳಿಸ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭವಿಷ್ಯ ನುಡಿದರು.
ಬಾಂಬೆ ದುಡ್ಡು ಇಲ್ಲಿ ಚಲಾವಣೆ ಎಂದು ಹೇಳಿಕೆ ನೀಡಿದ್ದ ಸಿದ್ದರಾಮಯ್ಯಗೆ ವಿಧಾನಸೌಧದಲ್ಲಿ ಮಾತನಾಡಿ ತಿರುಗೇಟು ನೀಡಿದ ಸಚಿವ ಅಶೋಕ್, ಕಾಂಗ್ರೆಸ್ ನವರಿಗೆ ಅನುಭವವಿರಬಹುದು. ಹಣ ತಂದು ಕೊಟ್ಟು ಅನುಭವವಿರಬಹುದು. ಅದಕ್ಕೆ ಅಂತ ಆರೋಪ ಮಾಡ್ತಾರೆ. ಸ್ವಂತ ಶಕ್ತಿ ಮೇಲೆ ಗೆಲ್ಲೋ ಶಕ್ತಿ ನಮಗಿದೆ. ಕುಮಾರಸ್ವಾಮಿ ದೂರವಿಡುವುದು. ಡಿಕೆಶಿ,ಪರಂ ದೂರುವಿಡೋಕೆ ಇಂತ ಹೇಳಿಕೆ ಕೊಡ್ತಾರೆ. ನಾನೊಬ್ಬನೇ ಇರೋದು ಅಂತ ಸಾರಿಕೊಳ್ತಿದ್ದಾರೆ. ಇದು ಸಿದ್ದರಾಮಯ್ಯನವರದ್ದೇ ಸ್ಲೋಗನ್ ಎಂದು ಕಿಡಿಕಾರಿದರು.
ಜೆಡಿಎಸ್ ಕಾಂಗ್ರೆಸ್ ಗೆ ಮತಕೊಡುವ ಜನವಿಲ್ಲ- ಡಿಸಿಎಂ ಅಶ್ವಥ್ ನಾರಾಯಣ್…
ಇದೇ ವೇಳೆ ಮಾತನಾಡಿದ ಅಶ್ವಥ್ ನಾರಾಯಣ್, ಮತ ನೀಡಲ್ಲ ಎಂಬುದಕ್ಕೆ ಯಾವುದೇ ಕಿಮ್ಮತ್ತಿಲ್ಲ. ಜೆಡಿಎಸ್,ಕಾಂಗ್ರೆಸ್ ಕೈಜೋಡಿಸಲ್ಲ. ಗೊಂದಲ ಮೂಡಿಸೋಕೆ ಇಂತಹ ಹೇಳಿಕೆ ನೀಡ್ತಿದ್ದಾರೆ. 15 ಕ್ಷೇತ್ರಗಳಲ್ಲೂ ನಾವು ಗೆಲ್ತೇವೆ. ಜೆಡಿಎಸ್ ಬೆಂಬಲದ ಬಗ್ಗೆ ನಮಗೆ ಗೊತ್ತಿಲ್ಲ. ಅಂತ ಪರಿಸ್ಥಿತಿಯೂ ಇನ್ನು ಉದ್ಬವಿಸಿಲ್ಲ. ಅಂತ ಪತಿಸ್ಥಿತಿ ಬಂದಾಗ ನೋಡೋಣ. ಅನರ್ಹರನ್ನ ನಾವು ಕೈಬಿಡುವುದಿಲ್ಲ. ಎಲ್ಲರನ್ನೂ ಕರೆದೊಯ್ಯುತ್ತೇವೆಂದು ನಮ್ಮ ನಾಯಕರೇ ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಆನಂದ್ ಸಿಂಗ್ ಪುತ್ರನ ಅದ್ಧೂರಿ ಮದುವೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್, ಇದು ವೈಯುಕ್ತಿಕವಾದುದು. ಚುನಾವಣಾ ಆಯೋಗ ಇದನ್ನ ಗಮನಿಸುತ್ತದೆ. ಆಯೋಗ ಅನುಮತಿ ಕೊಟ್ಟರೆ ಸಮಸ್ಯೆಯಾಗಲ್ಲ ಎಂದರು.
ಬಿಜೆಪಿ ಶಾಸಕರ ಹನಿಟ್ರ್ಯಾಪ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಯಾರ್ಯಾರು ಹನಿ ಅನ್ನೋದು ಗೊತ್ತಿಲ್ಲ. ಯಾರು ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಊಹಾಪೋಹದ ಹೇಳಿಕೆಗೆ ಕಿಮ್ಮತ್ತಿಲ್ಲ. ಇಲ್ಲಸಲ್ಲದ ಅಪಾದನೆ ಮಾಡುತ್ತಿದ್ದಾರೆ. ಬ್ಲಾಕ್ ಮೇಲ್ ತಂಡ ಹಿಡಿದಿದ್ದಾರೆ ಎನ್ನಲಾಗ್ತಿದೆ. ಈ ಬ್ಲಾಕ್ ಮೇಲ್ ತಂಡದಲ್ಲೇ ಇವರು ಇರಬಹುದು. ಅನರ್ಹರು ಹನಿಟ್ರಾಪ್ ನಲ್ಲಿ ಇದ್ದಾರಾ ಗೊತ್ತಿಲ್ಲ. ಸಿಸಿಬಿ ಮೂಲಗಳು ಅಂದ್ರೆ ನೀವು ಅವರನ್ನೇ ಕೇಳಿ ಹೇಳ್ತಾರೆ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು.
Key words: Siddaramaiah –minster- R. Ashok- predicted –dcm- ashwath narayan