ಸಿದ್ಧರಾಮಯ್ಯನವರೇ ಹಗರಣದಲ್ಲಿ ಭಾಗಿಯಾಗಿಲ್ಲ ಅಂದ್ರೆ ಸಿಬಿಐಗೆ ಕೊಡಿ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ,ಜುಲೈ, 13,2024 (www.justkannada.in): ಸಿದ್ಧರಾಮಯ್ಯನವರೇ ಮುಡಾ ಹಗರಣದಲ್ಲಿ ನೀವು ಭಾಗಿಯಾಗಿಲ್ಲ ಅಂದ್ರ ಸಿಬಿಐ ತನಿಖೆಗೆ ಕೊಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಜಯನಗರದಲ್ಲಿ ನಿಮಗೆ ಸೈಟ್ ಯಾಕೆ ಕೊಟ್ಟಿದ್ದಾರೆ. ಈ ಬಗ್ಗೆ ನೀವು  2013 ಚುನಾವಣೆ ಅಫಿಡವಿಟ್ ನಲ್ಲಿ ಮಾಹಿತಿ ಕೊಟ್ಟಿಲ್ಲ. ಸಿದ್ದರಾಮಯ್ಯ 14 ಸೈಟ್ ಪಡೆದಿದ್ದಾರೆ. ಬಿಜೆಪಿವಯರು ಕೊಟ್ರು ಅಂತಾರೆ. ಅಕಸ್ಮಾತ್ ಬಿಜೆಪಿಯವರು ಕೊಟ್ಟಿದ್ರೆ ಅವರ ಮೇಲೆ ಕ್ರಮ ಕೈಗೊಳ್ಳಿ . ಸಿದ್ದರಾಮಯ್ಯ ಅವರೇ ನೀವು ಏನು ಮಾಡಿಲ್ಲ ಅಂದ್ರೆ ಸಿಬಿಐಗೆ ಕೊಡಿ . ಹಗರಣದಲ್ಲಿ ಭಾಗಿಯಾಗಿಲ್ಲ ಅಂದ್ರೆ ಸಿಬಿಐ ತನಿಖೆಗೆ ಕೊಡಿ. ನಾವು ಪ್ರತಿಭಟನೆ ಮಾಡೋಕೆ ಹೋದ್ರೆ ಪೊಲೀಸರಿಂದ ಬಂಧಿಸುತ್ತೀರಿ. ಸಂವಿಧಾನ ಹತ್ಯೆ ಮಾಡುವ ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

ಯಾವುದೇ ಹಣಕಾಸಿನ ಪ್ಲ್ಯಾನ್ ಇಲ್ಲದೇ ಯೋಜನೆ ರೂಪಿಸಿದ್ದಾರೆ ಈ ಬಗ್ಗೆ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರೇ ಹೇಳಿದ್ದಾರೆ.  ವಾಲ್ಮೀಕಿ ಹಗರಣ ಘಟನೆ ನಡೆದು 40 ದಿನವಾದ್ರೂ ನಾಗೇಂದ್ರಗೆ ನೋಟಿಸ್ ಕೊಟ್ಟಿರಲಿಲ್ಲ ಹಗರಣದ ಪ್ರಕರಣದಲ್ಲಿ ಇಡಿ ಎಂಟ್ರಿ ಆದಾಗ ನೋಟಿಸ್ ಕೊಟ್ರು ಐಷಾರಾಮಿ ಹೋಟೆಲ್ ಗೆ ಕರೆದು ವಿಚಾರಣೆ ನಾಟಕ ಮಾಡಿದರು.  ಐಷರಾಮಿ ಹೋಟೆಲ್ ನ ಬಿಲ್ ಅನ್ನೂ ಎಸ್ ಐಟಿ ಅಧಿಕಾರಿಗಳೇ ಕೊಟ್ಟಿದ್ದಾರೆ. ಮಾತೆತ್ತಿದರೇ  ಮಿಸ್ಟರ್ ಮೋದಿ ಮಿಸ್ಟರ್ ಯಡಿಯೂರಪ್ಪ ಅಂತಾರೆ. ಮಿಸ್ಟರ್ ಸಿದ್ದರಾಮಯ್ಯ ಅವರೇ ನಿಮ್ಮ ಸರ್ಕಾರದಲ್ಲಿ ಏನು ನಡೆದಿದೆ  ಕಾಂಗ್ರೆಸ್ ಸರ್ಕಾರ  ಪರಮ ಕಡುಭ್ರಷ್ಟ ಸರ್ಕಾರ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.

Key words:  Siddaramaiah, muda scam, CBI, Union Minister, Prahlad Joshi