ಸಿದ್ದರಾಮಯ್ಯ ನನ್ ಮೇಲೆ ಸುಳ್ ಕೇಸು ಹಾಕಿಸುವ ಚಿಲ್ರೆ ಕೆಲ್ಸ ಮಾಡಿಲ್ಲ: ಜಿ.ಟಿ.ದೇವೇಗೌಡ

ಮೈಸೂರು,ನವೆಂಬರ್,28,2024 (www.justkannada.in): ಅಂದಿನ ಕಾಂಗ್ರೆಸ್ ಸರ್ಕಾರ ಜಿಟಿ ದೇವೇಗೌಡರನ್ನ ಬಂಧಿಸಲು ಸಿದ್ದತೆ ಮಾಡಿಕೊಂಡಿತ್ತು.  ಕುಮಾರಸ್ವಾಮಿ ಇಲ್ಲದಿದ್ದರೇ ಜಿಟಿ ದೇವೇಗೌಡರು ಮಗನ ಜೊತೆ ಜೈಲಿನಲ್ಲಿರಬೇಕಿತ್ತು ಎಂದು ಹೇಳಿಕೆ ನೀಡಿದ್ದ ಶಾಸಕ ಹೆಚ್ ಡಿ ರೇವಣ್ಣ ಅವರಿಗೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ತಿರುಗೇಟು ನೀಡಿದ್ದಾರೆ.

ನನ್ನ ಮೇಲೆ ಯಾರು ರಾಜಕೀಯವಾಗಿ ದೂರು ಕೊಟ್ಟಿಲ್ಲ. ನನ್ ಮೇಲೆ ಯಾವ್ ಕೇಸ್ ಇದೆ ತೋರಿಸಲಿ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲಿಕ್ಕೆ ರಾಜಕೀಯ ಮಾಡಿದ್ದಾರೆ. ನನ್ನನ್ನ ಸೋಲಿಸಲಿಕ್ಕೆ ಪ್ರಯತ್ನ ಮಾಡಿದ್ದಾರೆ. ಆದರೆ ಸುಳ್ಳು ಕೇಸ್ ಹಾಕಿಸುವ ಕೆಲಸ ಸಿದ್ದರಾಮಯ್ಯ ಕೂಡ ಮಾಡಿಲ್ಲ ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ .

ಮೈಸೂರಿನ ವಿವಿ ಪುರಂ ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ,  ನಾನು ಸಾಧ್ಯವಾದಷ್ಟು ಮಾಧ್ಯಮಗಳಿಂದ ದೂರ ಇದ್ದೀನಿ. ಏನು ಮಾತನಾಡಬಾರದು ಎಂದು ನನ್ನ ಮನಸ್ಸಿನಲ್ಲಿ ತೀರ್ಮಾನ ಮಾಡಿದ್ದೀನಿ. ಆದರೆ ಯಾಕೆ ನನ್ನ ಹೆಸರನ್ನ ಪದೇ ಪದೇ ಮಾತನಾಡುತ್ತಿದ್ದಾರೆ ಗೊತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನರ ಸಮಸ್ಯೆ ಆಲಿಸೋದು. ಅಭಿವೃದ್ಧಿ ಮಾಡೋದು ಬಿಟ್ಟು ಬೇರೆ ಯಾವುದು ಆಲೋಚನೆ ನನಗೆ ಇಲ್ಲ. ಮೈಸೂರಿನಲ್ಲಿ 15 ವರ್ಷಕ್ಕೆ ನಮ್ಮ ತಂದೆಯವರು ತೀರಿಕೊಂಡ ಬಳಿಕ ನಮ್ಮ ಗ್ರಾಮದಲ್ಲಿ ನಾವಿಲ್ಲದೆ ಯಾವುದೇ ತೀರ್ಮಾನ ಮಾಡುತ್ತಿರಲಿಲ್ಲ. ಆಗಿನಿಂದಲೂ ಗ್ರಾಮ ನೈರ್ಮಲ್ಯ ಬಗ್ಗೆ ಕೆಲಸ ಮಾಡಿದ್ದೆ. ಅದಕ್ಕೆ ಪ್ರಶಸ್ತಿ ಕೂಡ ಸಿಕ್ಕಿತ್ತು. ಹೀಗಾಗಿ ನಾನು ಎಲ್ಲಾ ರೀತಿಯ ಅನುಭವ ಪಡೆದಿದ್ದೇನೆ ಎಂದರು.

ನಮ್ಮ ತಂದೆ ಪಟೇಲರು ಈವರೆಗೂ ಯಾವುದೇ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿಲ್ಲ. ಸಾರ್ವಜನಿಕ ಜೀವನ ಪ್ರಾರಂಭ ಮಾಡಿ 54 ವರ್ಷ ಆಗಿದೆ. ನನ್ನ ಮೇಲೆ ಯಾರು ರಾಜಕೀಯವಾಗಿ ದೂರು ಕೊಟ್ಟಿಲ್ಲ. ನನ್ನ ಮಗ 2010ರಿಂದ ರಾಜಕೀಯ ಪ್ರಾರಂಭ ಮಾಡಿದರು. ನಮ್ಮ ಕುಟುಂಬದ ಯಾವೊಬ್ಬರ ಮೇಲು ಈಗಲೂ ಯಾವುದೇ ದೂರು ದಾಖಲಾಗಿಲ್ಲ. ಹುಣಸೂರಿಗೆ ಸಿಎಂ ಬಂದಾಗ ನನ್ನ ಅಭಿವೃದ್ಧಿ ಬಗ್ಗೆ ಮೆಚ್ಚುಗೆ ಮಾತನಾಡಿದರು ಎಂದು ಜಿಟಿ ದೇವೇಗೌಡ ತಿಳಿಸಿದರು.

ಬಿಎಸ್ ಯಡಿಯೂರಪ್ಪ ಸಿಎಂ ಆಗಬೇಕೆಂದು ನಾನು ಬಿಜೆಪಿಗೆ ಹೋಗಿದ್ದಾಗ ಗೃಹಮಂಡಳಿಯಲ್ಲಿ ಏನು ಮಾಡಬಾರದು ಎಂದು ಜೆಡಿಎಸ್, ಕಾಂಗ್ರೆಸ್ ನವರು ಮುಂದಾದರು. ಸಿದ್ದರಾಮಯ್ಯ ಜೊತೆ 25 ವರ್ಷ ಜೊತೆಯಲ್ಲಿದ್ದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಜೊತೆ ಒಂದೇ ಒಂದು ಫೋನ್ ಕೂಡ ಪೊಲೀಸರಿಗೆ ಮಾಡಿಲ್ಲ. ಯಾವ ಅರ್ಥದಲ್ಲಿ ರೇವಣ್ಣ ಈ ರೀತಿ ಹೇಳಿಕೆ ನೀಡಿದ್ರು ಗೊತ್ತಿಲ್ಲ. ನನ್ನ ಅರೆಸ್ಟ್ ಮಾಡ್ತಾರೆ ಬಿಡಿಸಿಕೊಡಿ ಎಂದು ಯಾರ ಬಳಿ ಕೇಳಿಲ್ಲ. ರೇವಣ್ಣನವರೇ ದಯವಿಟ್ಟು ಕ್ಷಮಿಸಿ. ನನ್ನ ಯಾರು ಕೂಡ ಅರ್ಥ ಮಾಡಿಕೊಳ್ಳಲಿಕ್ಕೆ ಸಾಧ್ಯವಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ರೇವಣ್ಣರನ್ನ ಕೇಳುತ್ತೇನೆ ಎಂದು ಜಿಟಿ ದೇವೇಗೌಡರು ಕಿಡಿಕಾರಿದರು.

Key words: Siddaramaiah, not, case, G.T Deve Gowda, HD Revanna