ಮೈಸೂರು,ಡಿಸೆಂಬರ್,18,2020(www.justkannada.in): ನನಗೆ ಯಾವ ಆಸೆಗಳು ಇಲ್ಲ. ನಾನು ಇನ್ನು ಚುನಾವಣೆಗೆ ನಿಲ್ಲಬೇಕಾ ಇಲ್ಲವಾ ಎಂಬುದನ್ನು ತೀರ್ಮಾನಿಸಿಲ್ಲ. ಚುನಾವಣೆಗೆ ನಿಲ್ಲುವುದರ ಬಗ್ಗೆ ಇನ್ನು ಆರು ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಚಾಮುಂಡೇಶ್ವರಿಯಲ್ಲಿ ‘ಪರ್ಯಾಯ ನಾಯಕತ್ವ’ ಕುರಿತು ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನನ್ನನ್ನು ಯಾರು ಯಾವ ಕ್ಷೇತ್ರಕ್ಕೂ ಕರೆದಿಲ್ಲ. ಚಾಮುಂಡೇಶ್ವರಿಯಲ್ಲಿ ಸೋತ ಬಳಿಕ ನಾನು ಕ್ಷೇತ್ರಕ್ಕೆ ಹೋಗಿಲ್ಲ ಎಂಬುದು ಸತ್ಯ. ಇವತ್ತು ಆ ಕ್ಷೇತ್ರದ ಮುಖಂಡರ ಸಭೆ ಕರೆದಿದ್ದೇನೆ. ಚಾಮುಂಡೇಶ್ವರಿಯಲ್ಲಿ ಪರ್ಯಾಯ ನಾಯಕತ್ವ ಕೇಳಿರೋದು ಒಳ್ಳೆಯ ಬೆಳವಣಿಗೆ. ಕೊನೆ ತನಕ ನಾನೇ ಇರಲು ಸಾಧ್ಯವಿಲ್ಲ. ಯಾರಾದರೂ ಒಬ್ಬರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರಬೇಕಲ್ಲವೆ. ಚಾಮುಂಡೇಶ್ವರಿ ಕ್ಷೇತ್ರ ಮುಖಂಡರು ಪರ್ಯಾಯ ನಾಯಕತ್ವದ ಮಾತು ಕೇಳಿಬಂದಿದೆ ಇದು ಸತ್ಯ ಎಂದು ಹೇಳಿದರು.
ಬಿಜೆಪಿಯವರು ಖಳನಾಯಕರು….
ಇತ್ತೀಚೆಗೆ ವಿಧಾನ ಪರಿಷತ್ ನಲ್ಲಿ ನಡೆದ ಗಲಾಟೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಮೊದಲು ತಪ್ಪು ಮಾಡಿದವರು ಬಿಜೆಪಿಯವರು. ಬಿಜೆಪಿಯವರು ಖಳನಾಯಕರು. ಬೆಲ್ ಮುಗಿಯುವ ಮುನ್ನವೆ ಉಪಸಭಾಪತಿ ಕುರ್ಚಿ ಮೇಲೆ ಕುಳಿತಿದ್ದು ಏಕೆ.? ಸಭಾಪತಿ ಇದ್ದಾಗ ಇದನ್ನು ಮಾಡಿದ್ದು ಸರಿ ಇದಿಯಾ.? ಘಟನೆಗೆ ಮೊದಲು ಪ್ರಚೋದಿಸಿದ್ದು ಯಾರು. ಆ ಮೇಲೆ ನಡೆದಿದ್ದು ಕೂಡ ತಪ್ಪೆ…? ಎಂದು ಘಟನೆ ಖಂಡಿಸಿದರು.
ಮಾಧುಸ್ವಾಮಿ ಮಾರ್ಷಲ್ ಗೆ ಹೊಡೆಯಲು ಹೋಗಿದ್ದ ಇದು ಮಂತ್ರಿ ಕೆಲಸನಾ…?
ನಾನು ಘಟನೆಯನ್ನ ಸಮರ್ಥಿಸುವುದಿಲ್ಲ. ಡಿಸಿಎಂ ಸಭಾಪತಿ ಪೀಠದ ಬಳಿ ಹೋಗಿದ್ದು ಯಾಕೆ..,? ಅವರಿಗೆ ಅಲ್ಲೇನು ಕೆಲಸ. ಮಾಧುಸ್ವಾಮಿ ಮಾರ್ಷಲ್ ಗೆ ಹೊಡೆಯಲು ಹೋಗಿದ್ದ ಇದು ಮಂತ್ರಿ ಕೆಲಸನಾ…. ? ಎಂದು ಕಿಡಿಕಾರಿದ ಸಿದ್ಧರಾಮಯ್ಯ, ಇಡೀ ಘಟನೆಯನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ಘಟನೆಗೆ ಮೊದಲು ಕಾರಣ ಯಾರು ಎಂಬುದು ಗೊತ್ತಾಗಲಿ. ಬಿಜೆಪಿಗೆ ಸುಳ್ಳು ಹೇಳಿ ಅದನ್ನು ನಂಬಿಸುವುದು ಅವರ ಕೆಲಸ. ಇಡೀ ಘಟನೆಯಲ್ಲಿ ಬಿಜೆಪಿಯವರು ಖಳನಾಯಕರು ಎಂದು ವಾಗ್ದಾಳಿ ನಡೆಸಿದರು.
english summary…..
Siddaramaiah calls BJP members villans
Mysuru, Dec. 18, 2020 (www.justkannada.in): “I don’t have any desires now. I have still not thought about whether I will contest the elections or not. I will decide about it within six months,” opined former Chief Minister Siddaramaiah.
Responding to the ‘alternative leadership’ question at Chamundeshwari constituency in Mysuru today, he said, “nobody has called me to any constituency. Indeed, I haven’t gone to the Chamundeshwari assembly constituency since I lost the elections last. I have called a meeting of the leaders of that constituency today. It is a good development that the voice for alternative leadership has come up in the constituency. It is not possible to stay till the last. Someone has to come to Chamundeshwari constituency.”
In his response to the recent incident that took place in the Legislative Council, Siddaramaiah alleged that it was the BJP people who committed a mistake. They are villains Why did they sit in the Deputy Speaker’s seat before the bell rang? Is it correct to do so when the Speaker is present? Who provoked the incident first? What happened after that is also incorrect …?,” he said.
Keywords: Siddaramaiah/ furore in Legislative council/ BJP people are villains
Key words: Siddaramaiah – villain – BJP-Chamundeshwari – constituency- alternative leadership