“ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್, ಇವರದು ಟ್ರಂಪಾಯಣದ ಕಥೆ” : ಸಿದ್ದರಾಮಯ್ಯ ವಿರುದ್ಧ ಹಳ್ಳಿಹಕ್ಕಿ ವಿಶ್ವನಾಥ್ ವಾಗ್ದಾಳಿ

ಮೈಸೂರು,ಫೆಬ್ರವರಿ,12,2021(www.justkannada.in) : ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್. ಇವರು ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ಗೆಲ್ಲುವುದಕ್ಕೂ ಆಗಲ್ಲ. ಇವರದು ಒಂಥರಾ ಟ್ರಂಪಾಯಣದ ಕಥೆ ಎಂದು ಎಂಎಲ್ ಸಿ ಹಳ್ಳಿಹಕ್ಕಿ ವಿಶ್ವನಾಥ್  ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.jk

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸೋಲನ್ನ ಒಪ್ಪಿಕೊಳ್ಳುವುದಿಲ್ಲ. ಸೋತರೆ ರಾಹುಕೇತುಗಳು ಸೋಲಿಸಿದರು ಅಂತಾರೆ. ನನ್ನನ್ನ ಬಿಟ್ಟರೆ ಇನ್ಯಾರು ಇರಬಾರದು ಅನ್ನೋ ಮನಸ್ಥಿತಿಯವರಾಗಿದ್ದು, ಸಿದ್ದರಾಮಯ್ಯ ಕರ್ನಾಟಕ ಟ್ರಂಪ್ ಇದ್ದಂತೆ ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ಸ್ವಾರ್ಥದ ಹೋರಾಟ

ರಾಜ್ಯದಲ್ಲಿ ಸಿದ್ದರಾಮಯ್ಯರಿಂದ ಅಹಿಂದ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹತಾಶೆಯಿಂದ ಚಡಪಡಿಸುತ್ತಿದ್ದು, ರಾಜಕೀಯ ಚಡಪಡಿಕೆ ಶುರುವಾಗಿದೆ.  ಇದು ಯಾವ ಅಹಿಂದ ಹೋರಾಟವೂ ಅಲ್ಲ. ಇದು ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರ ಸ್ವಾರ್ಥದ ಹೋರಾಟ ಎಂದು ಕಿಡಿಕಾರಿದರು.

ಸಿದ್ದರಾಮಯ್ಯಗೆ ಅಸ್ತಿತ್ವ, ಅಭದ್ರತೆ ಕಾಡುತ್ತಿದೆ

ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಅಹಿಂದ ಎಂದು ಚಡಪಡಿಸುತ್ತಿದ್ದಾರೆ. ಅವರಿಗೆ ಅಸ್ತಿತ್ವ, ಅಭದ್ರತೆ ಕಾಡುತ್ತಿದೆ. ಕುರುಬ ಸಮಾಜದ ಎಸ್ ಟಿ ಮೀಸಲಾತಿ ಹೋರಾಟ ಅವರಿಲ್ಲದೆ ಯಶಸ್ವಿಯಾಗಿದೆ. ಲಕ್ಷಾಂತರ ಜನರು ಸೇರಿಸಿ ಯಶಸ್ಸು ಕಂಡಿದ್ದೇವೆ. ನಾನು ಇಲ್ಲದಿದ್ದರೆ ಆಗಲ್ಲ ಎಂದುಕೊಂಡಿದ್ದರು. ಅವರಲ್ಲಿ ನಾನು, ನಾನು ಅನ್ನೋ ಸ್ವಾರ್ಥ ಇತ್ತು. ಸಮುದಾಯ ನನ್ನ ಜೊತೆ ಇಲ್ಲ ಅನ್ನೋದು ಈಗ ಅವರಿಗೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಡಿಕೆ ಶಿವಕುಮಾರ್ ನಾಯಕತ್ವ ಪ್ರಬಲವಾಗುತ್ತಿದೆ

ಪಕ್ಷ ಹಾಗೂ ಸಮುದಾಯ ಎರಡರಲ್ಲೂ ಸಿದ್ದು ಏಕಾಂಗಿಯಾಗುತ್ತಿದ್ದಾರೆ. ರಾಜಕೀಯ ಅಸ್ತಿತ್ವಕ್ಕೆ ಚಡಪಡಿಕೆ ಶುರುವಾಗಿದೆ. ಯಾವ ಹೋರಾಟ ಮಾಡುತ್ತೀರಾ? ಎಂದು ಪ್ರಶ್ನಿಸಿದರು.

ನಾನು ಸಿದ್ದರಾಮಯ್ಯ ಮೈಸೂರಿನಲ್ಲೇ ಓದಿದ್ದು, ಅವರು ಯಾವ ವಿದ್ಯಾರ್ಥಿ ಹೋರಾಟದಲ್ಲೂ ಇರಲಿಲ್ಲ. ತಮ್ಮ ಅಭದ್ರತೆ ಮುಚ್ಚಿಕೊಳ್ಳಲು ಅಹಿಂದ ಬಳಸುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ಬಿಟ್ಟು ಹಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ, ಅಲ್ಪಸಂಖ್ಯಾತರನ್ನು ತುಳಿದು ಹಾಕಿದ್ದಾರೆ. ಮುಸ್ಲಿಂರನ್ನು ಸಾಕಷ್ಟು ಬಾರಿ ಸೋಲಿಸಲು ಕಾರಣರಾಗಿದ್ದಾರೆ ಎಂದು ಅಸಮಾಧಾನವ್ಯಕ್ತಪಡಿಸಿದರು.

ನಾಯಕತ್ವದ ಬದಲಾವಣೆ ಪಕ್ಷದ ಆಂತರಿಕ ವಿಚಾರ Siddaramaia,Trump,Karnataka,Story,Trump,Siddaramaiah,opposite,birdcage,Vishwanath,Bargainಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಯಡಿಯೂರಪ್ಪ ಅವರನ್ನು ನೋಡಿದ ಕೂಡಲೇ ಅವರಿಗೆ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಅದ‌ನ್ನು ಒಮ್ಮೆ ಪಡೆಯಬೇಕೆಂಬ ಚಡಪಡಿಕೆ ಅವರಿಗೆ. ಹೀಗಾಗಿ, ನಾಯಕತ್ವದ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಅದು ನಮ್ಮ ಪಕ್ಷದ ಆಂತರಿಕ ವಿಚಾರ ಎಂದು ತಿಳಿಸಿದ್ದಾರೆ.

ENGLISH SUMMARY…

H. Vishwanath calls Siddaramaiah as ‘Karnataka’s Trump’
Mysuru, Feb. 12, 2021 (www.justkannada.in): “Siddaramaiah is Karnataka’s Trump. Neither he accepts failure, nor can he win. His story is like that of Donald Trump,” said MLC H. Vishwanath.
Speaking to the presspersons in Mysuru today he said, “Siddaramaiah won’t accept his failure. If he fails he says he lost because of ‘Rahu and Ketu’. He doesn’t want others to win or grow. He is frustrated politically,” he added.
In his response about Siddaramaiah’s Ahinda struggle, Viswhanath said it is just Siddu’s and his friend Mahadevappa’s selfish fight.
“I and Siddaramaiah both studied in Mysuru only and he has not taken part in any student protests. He is using Ahinda just to conceal his insecurity feeling. He is using minorities for his political interests, in fact, he has been the reason many times for the failure of minorities,” he alleged.
Keywords: H. Vishwanath/ Siddaramaiah is Karnataka’s Trump/ Ahinda

key words : Siddaramaia-Trump-Karnataka-Story-Trump-: Siddaramaiah-opposite-birdcage-Vishwanath-Bargain